ಕೆ ಎಸ್‍ ಆರ್ ಟಿ ಸಿ ಹಳೇ ಬಸ್ ಪಾಸ್ ತೋರಿಸಿ ಪ್ರಯಾಣಕ್ಕೆ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15.2019-20ನೇ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಪ್ರಾರಂಭವಾಗಿರುವುದರಿಂದ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ, ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು, 2018-19 ನೇ ಸಾಲಿನಲ್ಲಿ ವಿತರಣೆಯಾಗಿರುವ ವಿದ್ಯಾರ್ಥಿ ಪಾಸುಗಳನ್ನು ತೋರಿಸಿ, ಜೂನ್ 30 ರವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿಗಳು 2018-19 ನೇ ಸಾಲಿನ ವಿದ್ಯಾರ್ಥಿ ಪಾಸಿನ ಜೊತೆಗೆ ಪ್ರಸಕ್ತ ಸಾಲಿನ ಭೋಧನಾ ಶುಲ್ಕ ರಸೀದಿ ಅಥವಾ ಶಾಲಾ/ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಿ ಪಾಸಿನಲ್ಲಿ ನಮೂದಿಸಿರುವ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರುತ್ತದೆ.ವಿದ್ಯಾರ್ಥಿಗಳು ಮಾಧ್ಯಮಿಕ ತರಗತಿಯಿಂದ ಪೌಢಶಾಲೆಗೆ ಅಥವಾ ಪೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಸೇರುವ ಸಂಧರ್ಭದಲ್ಲಿ ಅಥವಾ ಶಾಲೆ/ಕಾಲೇಜು ಬದಲಿಸಿದ್ದ ಸಂದರ್ಭದಲ್ಲಿ ಹಾಗೂ ಮಾರ್ಗ ಬದಲಾವಣೆಯಾಗಿರುತ್ತದೆ. ಹಲವಾರು ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ವಿದ್ಯಾರ್ಥಿ ಪಾಸ್ ಪಡೆದಿರುವುದಿಲ್ಲ. ಆದರೆ ಈಗ ಶಾಲಾ/ಕಾಲೇಜು ಬದಲಾವಣೆಯಿಂದ ಪಾಸ್ ಅವಶ್ಯಕತೆಯಿರುತ್ತದೆ.

Also Read  ಹೆಸರು ಲಕ್ಷ್ಮೀ.. ಲಿಂಗ ಗಂಡು.. ಬಸ್ ನಲ್ಲಿ ಫ್ರೀ ಪ್ರಯಾಣ ➤ ಗಲಿಬಿಲಿಗೊಂಡ ಕಂಡಕ್ಟರ್

ಆದ್ದರಿಂದ ಇಂತಹ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಶಾಲಾ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಜೂನ್ 30 ರವರೆಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಹಿಂದಿನ ವರ್ಷದ ಬಸ್ ಪಾಸ್ ಇಲ್ಲದ ಸಂದರ್ಭದಲ್ಲಿ ನೂತನ ಶಾಲೆ/ಕಾಲೇಜಿಗೆ ಸೇರ್ಪಡೆಯಾಗಿರುವ ಭೋಧನಾ ಶುಲ್ಕ ರಸೀದಿ ಅಥವಾ ಶಾಲಾ/ಕಾಲೇಜಿನಿಂದ ವಿತರಣೆ ಮಾಡಿರುವ ಗುರುತಿನ ಚೀಟಿಯನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ ಎಂದು ಪುತ್ತೂರು ವಿಭಾಗದ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top