ಬೋಧನಾಂಗ ಪ್ರೇರಣಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15.ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಆಂತರಿಕ ಗುಣಮಟ್ಟ ಖಾತರಿ ಮತ್ತು ಸಿಪಿಇ ಕೋಶ, ಟುವಡ್ರ್ಸ್ ಇನ್‍ಕ್ಲೂಸಿವ್ ಎಜುಕೇಶನ್ ಎಂಬ ಬೋಧನಾಂಗ ಪ್ರೇರಣಾ ಕಾರ್ಯಕ್ರಮ ಕಾಲೇಜಿನ ಡಾ ಶಿವರಾಮ ಕಾರಂತ ಸಭಾಭವನದಲ್ಲಿ ಜೂನ್ 17 ರಂದು ಪೂರ್ವಾಹ್ನ 10 ಗಂಟೆಗೆ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಎಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರಿನ ಖ್ಯಾತ ಮಾನಸಿಕ ಆರೋಗ್ಯ ಸಲಹಗಾರ್ತಿ ಡಾ. ರೊಮಿಲಾ ಶೇಖರ್ ಹಾಗೂ ವಿಶ್ವವಿದ್ಯಾನಿಲಯ ಕಾಲೇಜಿನ ಯೋಗ ವಿಜ್ಞಾನ ವಿಭಾಗದ ಡಾ ಅಜಿತೇಶ್ ಭಟ್ ಎನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವೈಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Also Read  ಟಿವಿಎಸ್ ಮೋಟಾರ್ ಕಂಪನಿಯಿಂದ ರಾಜ್ಯದಲ್ಲಿ 2 ಸಾವಿರ ಕೋಟಿ ರೂ. ಹೂಡಿಕೆ

error: Content is protected !!
Scroll to Top