ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.15. ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನವನ್ನು ಕೇಂದ್ರದಲ್ಲಿ ಇತ್ತೀಚೆಗೆ ಆಚರಿಸಿಲಾಯಿತು.
ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎ.ಟಿ. ರಾಮಚಂದ್ರ ನಾಯ್ಕ ಚಿಕ್ಕು ಹಣ್ಣಿನ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ದಕ್ಷಿಣ ಏಷ್ಯಾದ ಕಲುಷಿತ ನಗರಗಳ ಟಾಪ್ 30 ರ ಪಟ್ಟಿಯಲ್ಲಿರುವ ಅಷ್ಟೂ ನಗರಗಳು ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳು ಸೇರಿವೆ ಎಂದು ಹೇಳಿದರು. ಈ ಪೈಕೆ 22 ನಗರಗಳು ಭಾರತದಲ್ಲೇ ಇವೆ. ದಕ್ಷಿಣ ಏಷ್ಯಾದ ವಾಯುಮಾಲಿನ್ಯ ಸೂಚ್ಯಂಕದಲ್ಲಿ ಭಾರತದ್ದೇ ಸಿಂಹಪಾಲು ಎಂದು ತಿಳಿಸಿದರು. ಇಲ್ಲಿನ ವಾತಾವರಣ ಹದಗೆಟ್ಟಿದ್ದು, ಜೀವಿಸಲು ಯೋಗ್ಯವಿಲ್ಲ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿಗಳು ಹೇಳುತ್ತಿವೆ.

Also Read  ಓದುವ ಹವ್ಯಾಸ ಬೆಳೆಸಿಕೊಳ್ಳಿ ➤ ಡಾ|| ಚೂಂತಾರು

ಹಾಗಾಗಿ, ಹಸಿರು ಮನೆ (ಗ್ರೀನ್ ಹೌಸ್ ಎಫೆಕ್ಟ್), ಜಾಗತೀಕ ತಾಪಮಾನ ಏರಿಕೆ, ಜೀವವಾಯು ಆಂಮ್ಲಜನಕ ಕೊರತೆ, ಶುದ್ಧ ಕುಡಿಯುವ ನೀರಿನ ಕೊರತೆ, ಮಳೆಯ ಅಭಾವ, ಮುಂತಾದವುಗಳು ಮಾನವ ಎದುರಿಸುವ ಸಮಸ್ಯೆಗಳಾಗಿವೆ ಎಂದು ಹೇಳಿದರು.ಆವರಣವನ್ನು ಹೂ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಪರಿಸರ ಜಾಗೃತಿಯ ಸಂಕೇತವಾಗಿ ಸಂಸ್ಥೆಯ ವಿಜ್ಞಾನಿಗಳು, ತಾಂತ್ರಿಕ ಸಲಹೆಗಾರರು ಮತ್ತು ಭೋದಕೇತರ ಸಿಬ್ಬಂದಿ ವರ್ಗದವರು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಈ ವರ್ಷದ ವಿಶ್ವಪರಿಸರದ ಮುಖ್ಯ ಶೀರ್ಷಿಕೆಯಾದ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಯಿತು.

Also Read  ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ➤ ಕಡಬ ಪೇಟೆಯ ಒಂದು ಭಾಗ ಸೀಲ್‌ಡೌನ್

error: Content is protected !!
Scroll to Top