(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂನ್.14.ಕಳೆದೊಂದು ತಿಂಗಳಿಂದ ಧರ್ಮಸ್ಥಳ ಸ್ನಾನಘಟ್ಟ ನೇತ್ರಾವತಿಯಲ್ಲಿ ನೀರಿನ ಹರಿವು ಕ್ಷೀಣಿಸಿದ್ದರಿಂದ ಭಕ್ತರ ತೀರ್ಥಸ್ನಾನಕ್ಕೆ, ದಿನ ಬಳಕೆಗೆ ನೀರಿನ ಅಭಾವ ಆತಂಕ ಎದುರಾಗಿತ್ತು. ಸದ್ಯ ಚಾರ್ಮಾಡಿ ಸಹಿತ ಘಟ್ಟ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಬತ್ತಿದ ನದಿ-ತೊರೆಗಳಿಗೆ ಜೀವಕಳೆ ಬಂದಿದೆ.ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟ ದಲ್ಲಿನ ಕಿಂಡಿ ಅಣೆಕಟ್ಟು ಭರ್ತಿ ಯಾಗಿದೆ.
ನದಿ ನೀರನ್ನೇ ಆಶ್ರಯಿಸಿದ್ದ ಕೃಷಿಕರು ಹರ್ಷದಲ್ಲಿದ್ದಾರೆ. ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಜೀವನದಿ ನೇತ್ರಾವತಿ ಸಹಿತ ತಾಲೂಕಿನ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ನೇತ್ರಾವತಿ ಸ್ನಾನಘಟ್ಟದಲ್ಲಿ ಭಕ್ತರು ತೀರ್ಥಸ್ನಾನದಲ್ಲಿ ಪಾಲ್ಗೊಂಡರು. ಇತ್ತ ಮಂಗಾರು ವಿಳಂಬ ವಾಗಿದ್ದರಿಂದ ಈಗಾಗಲೇ ಭತ್ತ ಕೃಷಿ ಆರಂಭಿಸಬೇಕಿದ್ದ ಕೃಷಿಕರಲ್ಲೂ ಆತಂಕ ತರಿಸಿತ್ತು. ಸದ್ಯ ಮಳೆ ಪ್ರಮಾಣ ಏರಿಕೆಯಾ ದ್ದರಿಂದ ಕೃಷಿ ಚಟುವಟಿಕೆಗೆಕಳೆಬಂದಿದೆ.ಕೃಷಿ ಇಲಾಖೆ 50 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನು ಇರಿಸಿತ್ತು.