ದೂರ ಶಿಕ್ಷಣ ಕೇಂದ್ರದ ವಾರ್ಷಿಕ ಕೋರ್ಸುಗಳ ಪರೀಕ್ಷಾ ಪ್ರವೇಶ ಪತ್ರ ಪ್ರಕಟ

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಕೇಂದ್ರದ ಸ್ನಾತಕ (ಯುಜಿ) ಪದವಿ ಪರೀಕ್ಷೆಗಳು ಜೂನ್ 17 ರಿಂದ ಹಾಗೂ ಸ್ನಾತಕೋತ್ತರ (ಪಿಜಿ) ಪದವಿ ಪರೀಕ್ಷೆಗಳು ಜೂನ್ 24 ರಿಂದ ಆರಂಭಗೊಳ್ಳುವುದು. ಪರೀಕ್ಷಾ ಪ್ರವೇಶ ಪತ್ರವನ್ನು ಸೂಚಿಸಿದ ಪರೀಕ್ಷಾ ಕೇಂದ್ರದಿಂದ ಜೂನ್ 15 ರಂದು ಸ್ನಾತಕ ಪದವಿ (ಯುಜಿ) ವಿದ್ಯಾರ್ಥಿಗಳು ಹಾಗೂ ಜೂನ್ 21 ರಂದು ಸ್ನಾತಕೋತ್ತರ ಪದವಿ (ಪಿಜಿ) ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು.

ಪರೀಕ್ಷಾ ಕೇಂದ್ರಗಳ ವಿವರ ಇಂತಿವೆ: ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು (ಬಿ.ಎ/ಬಿ.ಕಾಂ/ಬಿ.ಬಿಎಂ,) ಡಾ. ದಯಾನಂದ ಪೈ ಸತೀಶ್ ಪೈ ಪ್ರಥಮ ದರ್ಜೆ ಕಾಲೇಜು, ಕಾರ್‍ಸ್ಟ್ರೀಟ್, ಮಂಗಳೂರು (ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ) ರೋಸಾರಿಯೋ ಕಾಲೇಜ್ ಆಫ್ ಮ್ಯಾನೇಜ್‍ಮೆಂಟ್ ಸ್ಟಡೀಸ್, ಪಾಂಡೇಶ್ವರ, ಮಂಗಳೂರು (ಎಂ.ಕಾಂ ಹಾಗೂ ಎಂಬಿಎ (ಟೂರಿಸಂ),) ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ, ಉಡುಪಿ ಜಿಲ್ಲೆ (ಬಿ.ಎ/ಬಿ.ಕಾಂ/ಬಿ.ಬಿಎಂ) ಡಾ. ಜಿ ಶಂಕರ್ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಅಜ್ಜರಕಾಡು, ಉಡುಪಿ (ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ), ಎಂ.ಕಾಂ, ಎಂ.ಬಿ.ಎ).

Also Read  ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ತಂದೆ-ಮಗ ►20 ವರ್ಷಗಳ ನಂತರ ಮರಳಿ ಗೂಡಿಗೆ

ಟೂರಿಸಂ, ಸೈಂಟ್ ಫಿಲೋಮಿನಾ ಕಾಲೇಜು, ಸ್ನಾತಕೋತ್ತರ ಕೇಂದ್ರ, ದರ್ಬೆ ಪೋಸ್ಟ್, ಪುತ್ತೂರು (ಬಿ.ಎ/ಬಿ.ಕಾಂ/ಬಿ.ಬಿಎಂ.,ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ), ಎಂ.ಕಾಂ, ಎಂ.ಬಿ.ಎ (ಟೂರಿಸಂ), ಪೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿ (ಬಿ.ಎ/ಬಿ.ಕಾಂ/ಬಿ.ಬಿಎಂ.,ಎಂ.ಎ (ಕನ್ನಡ, ಅರ್ಥಶಾಸ್ತ್ರ, ಇಂಗೀಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಹಿಂದಿ), ಎಂ.ಕಾಂ, ಎಂ.ಬಿ.ಎ (ಟೂರಿಸಂ). ಪರೀಕ್ಷಾ ಕೇಂದ್ರಗಳ ಮಾಹಿತಿಯನ್ನು ವೆಬ್‍ಸೈಟ್. www.mangaloreuniversity.ac.in ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಬಂಟ್ವಾಳ: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸ್ ದಾಳಿ ➤ ನೆಕ್ಕಿಲಾಡಿಯ ಓರ್ವನ ಸಹಿತ ಎಂಟು ಮಂದಿಯ ಬಂಧನ

error: Content is protected !!
Scroll to Top