ಕೃಷಿ ಪಂಡಿತ/ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.2018-19ನೇ ಸಾಲಿನ ಕೃಷಿ ಪಂಡಿತ/ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಭಾಗವಹಿಸಲು ಇಚ್ಛಿಸುವವರು ರಾಜ್ಯ ಕೃಷಿ ಕ್ಷೇತ್ರದಲ್ಲಿ ವಿನೂತನ/ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು.

ಭಾಗವಹಿಸುವವರ ಸಂಶೋಧನೆ/ಸಾಧನೆಗಳು ಮೂಲ ಸ್ವರೂಪದ್ದಾಗಿದ್ದು ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು. ಅಲ್ಲದೇ ಅವರ ಸಂಶೋಧನೆಗಳು/ಸಾಧನೆಗಳು ವ್ಯಾಪಕವಾಗಿ ಅಳವಡಿಸಲ್ಪಟ್ಟಿದ್ದು ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು. ಪ್ರಶಸ್ತಿಗೆ ಭಾಗವಹಿಸಲು ಇಚ್ಛಿಸುವವರು ತಮ್ಮ ನಾಮನಿರ್ದೇಶನಗಳನ್ನು ನಿಗದಿತ ನಮೂನೆಯಲ್ಲಿ (ಅನುಬಂಧ-1 ಎ) ತುಂಬಿ ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಜುಲೈ 20 ರೊಳಗಾಗಿ ಸಲ್ಲಿಸಬೇಕು.

ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸುವವರ ಮುಖ್ಯ ಸೂಚನೆ ಇಂತಿವೆ: ಕೃಷಿ, ತೋಟಗಾರಿಕೆ ಪಶುಸಂಗೋಪನೆ ಮತ್ತು ಜಲಾನಯನ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ/ ನಿವೃತ್ತರಾದವರನ್ನು ಮತ್ತು ಅವರ ಕುಟುಂಬದವರನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಪರಿಗಣಿಸಬಹುದು. ಅರ್ಜಿದಾರರ ಹೆಸರಿನಲ್ಲಿ ಪಹಣಿ ಪತ್ರ (ಭೂ ದಾಖಲೆ/ಆರ್.ಟಿ.ಸಿ.) ಕಡ್ಡಾಯವಾಗಿರಬೇಕು. ಈ ಹಿಂದೆ ಕೃಷಿ ಪಂಡಿತ್ ಪ್ರಶಸ್ತಿ ಪಡೆದವರು ಮತ್ತು ಇದೇ ಸಾಧನೆಗಾಗಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸಮಾನಾಂತರ ಪ್ರಶಸ್ತಿ ಪಡೆದಿರುವವರು ಸ್ಪರ್ಧಿಸುವಂತಿಲ್ಲ.

Also Read   ಉಳ್ಳಾಲ: ಪೋಕ್ಸೊ ಆರೋಪಿಯ ಖುಲಾಸೆ !

ಪ್ರಶಸ್ತಿಯ ವಿವರ ಮತ್ತು ಅರ್ಜಿ ನಮೂನೆಗಳನ್ನು ಸಂಬಂದಿತ ತಾಲೂಕು ಸಹಾಯಕ ಕೃಷಿ ನಿರ್ದೇಶಕರು/ ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳು ಪ್ರಾಥಮಿಕ ಕ್ಷೇತ್ರ ಭೇಟಿ ಕೈಗೊಂಡು ಅವರು ಗಮನಿಸಿದ ಅಂಶಗಳೊಂದಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಜುಲೈ 31ರೊಳಗಾಗಿ ಸಲ್ಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ ತಿಳಿಸಿದೆ.

Also Read  ಆರ್‌.ಆರ್ ‌ನಗರದಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮುನಿರತ್ನ

error: Content is protected !!
Scroll to Top