ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಅನೇಕ ಕಡೆಗಳಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.ಜೆಪ್ಪು ಕುಡ್ಪಾಡಿ, ಕಾಟಿಪಳ್ಳ 2ನೇ ಬ್ಲಾಕ್, ಬಿಜೈ. ಪಣಂಬೂರು/ಬೈಕಂಪಾಡಿ ಉರ್ವಸ್ಟೋರ್/ಕೋಡಿಕಲ್/ಕೊಟ್ಟಾರ, ಯೆಯ್ಯಾಡಿ, ಬಿರಾವು, ಪಡುಪಣಂಬೂರು,. ಸೋಮೇಶ್ವರ ಉಚ್ಚಿಲ, ಬೆಳ್ಮ,, ಮೂಡು ಮಾರ್ನಾಡು, ಶಿರ್ತಾಡಿ, ಕಿನ್ಯ ಬಂಟ್ವಾಳ ತಾಲೂಕಿನಲ್ಲೂ ಅನೇಕ ಕಡೆಗಳಲ್ಲಿ ಅರ್ಜಿಅಹ್ವಾನಿಸಲಾಗಿದೆ.

ಮುರತಗುಂಡಿ, ಹಳೇಗೇಟು, ಪುರಸಭೆ ವ್ಯಾಪ್ತಿಯ ಗೂಡಿನ ಬಳಿ , ಫರಂಗಿಪೇಟೆ, ಮೇರಮಜಲು, ಕೊಡ್ಮಣ್ ಬೆಳ್ತಂಗಡಿ ತಾಲೂಕಿನ ಪಿಲಿಗೂಡು, ಮೂಡುಕೋಡಿ, ಆರಂಬೋಡಿ, ರೆಖ್ಯ ಈ ಸ್ಥಳಗಳಲ್ಲಿ ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವ ಅವಶ್ಯಕತೆ ಇದ್ದು, ನ್ಯಾಯಬೆಲೆ ಅಂಗಡಿ ತೆರೆಯುವ ಬಗ್ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಉಳ್ಳವರು ಸಂಬಂಧಪಟ್ಟ ಕಚೇರಿಗಳ ಆಹಾರ ಶಾಖೆ ಅಥವಾ ಜಂಟಿ ನಿರ್ದೇಶಕರ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ದಕ್ಷಿಣ ಕನ್ನಡ ಮಂಗಳೂರು ಇವರ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Also Read  ಸ್ಕೂಟರ್- ಕೆಎಸ್ಸಾರ್ಟಿಸಿ ಬಸ್ ನಡುವೆ ಢಿಕ್ಕಿ; ಸವಾರೆ ಮೃತ್ಯು, ಸಹಸವಾರೆ ಗಂಭೀರ

error: Content is protected !!
Scroll to Top