ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ.ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ಬಿರುಸು ಪಡೆದಿದ್ದು, ನಗರದ ವಿವಿಧೆಡೆ ಧಾರಾಕಾರ ಮಳೆಯಿಂದಾಗಿ ಮರಗಳು ಬಿದ್ದು ಹಾಗೂ ರಸ್ತೆ ಕಾಮಗಾರಿಗಳಿಂದಾಗಿ ನೀರು ಹರಿಯುವಲ್ಲಿ ತೊಂದರೆಯಾಗಿತ್ತು.

ಕಳೆದ ಸಾಲೀನ ಮಳೆಯ ಅನುಭವವನ್ನು ಹಿನ್ನಲೆಯಾಗಿರಿಸಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನೊಳಗೊಂಡಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕೈಗೊಂಡ ಕ್ರಮಗಳಿಂದಾಗಿ ಸಮಸ್ಯೆ ವರದಿಯಾದ ತಕ್ಷಣವೇ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ. ಕೃತಕ ನೆರೆಗೆ ಕಾರಣಗಳನ್ನು ಕಂಡುಕೊಂಡು ಪರಿಹರಿಸಲು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ. ಅದ್ಯಪಾಡಿ ಪ್ರದೇಶದಲ್ಲಿ ಭೂಕುಸಿತ ಅಥವಾ ನೀರು ಬಂದರೆ ದೋಣಿಯನ್ನು ಕಾಯ್ದಿರಿಸಲಾಗಿದೆ.

ಚಾರ್ಮಾಡಿಯಲ್ಲಿ ಮರ ಬಿದ್ದಿರುವುದನ್ನು ತೆರವುಗೊಳಿಸಲಾಗಿದೆ. ಕೊಡಿಯಾಲ್‍ಬೈಲ್, ಡೊಂಗರಕೇರಿ ಸೋನಾರ್ ಅಪಾರ್ಟ್‍ಮೆಂಟ್ ಬಳಿ ನೀರು ನಿಲ್ಲಲು ಕಾರಣವಾದ ಸ್ಲ್ಯಾಬ್ ತೆಗೆಯಲು ಸೂಚಿಸಲಾಗಿದೆ. ಪಾಣೆಮಂಗಳೂರಿನ ಆಲಡ್ಕದಲ್ಲಿ ಭಾರೀ ಪ್ರವಾಹ ಬಂದಿಲ್ಲ; ಕೊಟ್ಟಾರ ಚೌಕಿಯಲ್ಲಿ ನೀರು ನಿಲ್ಲುತ್ತಿಲ್ಲ; ಕಣ್ಣೂರಿನಲ್ಲಿ ಸಂಭವಿಸಿದ ಕೃತಕ ನೆರೆಯನ್ನು ಪರಿಹರಿಸಲಾಗಿದೆ. ಡೊಂಗರಕೇರಿ ಕಸ್ಬಾ ಬಜಾರ್ ಸಮಸ್ಯೆ ಪರಿಹರಿಸಲಾಗಿದೆ. ಕುಲಶೇಕರ ಬಳಿಯ ಕೋಟೆಮುರ ಪ್ರದೇಶದ ನೆರೆ ಇಳಿಯಲು ದಾರಿ ನಿರ್ಮಿಸಲಾಗಿದೆ.

ಪಂಪ್‍ವಲ್ ಬಳಿ ನೀರಿನ ತಡೆಗೆ ಅಡ್ಡಿಯನ್ನು ನಿವಾರಿಸಲಾಗಿದೆ. ಮುಂಜಾನೆ ಸುರಿದ ಮಳೆಗೆ ಪಡೀಲ್‍ನಲ್ಲಿ ಹರಿಯುತ್ತಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಸ್ಥಳೀಯ ಕಾರ್ಪೊರೇಷನ್ ವ್ಯಾಪ್ತಿಗೆ ಬರುವ ನೋಡಲ್ ಅಧಿಕಾರಿಗಳ ಹೆಸರು ಮತ್ತು ಪದನಾಮ ವಿವರಗಳು ಇಂತಿವೆ, ಶ್ರೀಮತಿ ಗಾಯತ್ರಿ ನಾಯ್ಕ ಉಪ ಆಯುಕ್ತರು ಮಹಾನಗರ ಪಾಲಿಕೆ, ಮಂಗಳೂರು. ಮೊಬೈಲ್ ಸಂಖ್ಯೆ 9448259312, ಕಲ್ಲಾಪು, ಪೆರ್ಮನೂರ, ಜಪ್ಪಿನ, ಮೊಗರು ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಗುರುರಾಜ್ ಮರಳಿಹಳ್ಳಿ ಇ.ಇ. ಮಂಗಳೂರು, ಮೊಬೈಲ್ ಸಂಖ್ಯೆ 9448837205 ಆಯ್ಕೆ ಮಾಡಲಾಗಿದೆ.

Also Read  ಉಡುಪಿ: ಅಪರೂಪದ ಐತಿಹಾಸಿಕ ಕಲ್ಲಿನ ರಚನೆ ಪತ್ತೆ !!

ಕುದ್ರೋಳಿ, ಅಳಕೆ, ಬಂದರು, ಕಾರ್‍ಸ್ಟ್ರೀಟ್ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಲಿಂಗೇಗೌಡ ಇ.ಇ. ಎಮ್‍ಸಿ.ಸಿ. ಮಂಗಳೂರು, ಮೊಬೈಲ್ ಸಂಖ್ಯೆ 9449555511, ಕೊಡಿಯಾಲ್‍ಬೈಲ್ ,ಲಾಲ್‍ಬಾಗ್, ಬಿಜೈ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಗಣೇಶ್ ಇ.ಇ. ಮಂಗಳೂರು, ಮೊಬೈಲ್ ಸಂಖ್ಯೆ 9449935900, ಕಂಕನಾಡಿ, ವೆಲೆನ್ಸಿಯಾ, ಪಂಪ್‍ವೆಲ್ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ರವಿಶಂಕರ್ ಎ.ಇ.ಇ. ಮಂಗಳೂರು, ಮೊಬೈಲ್ ಸಂಖ್ಯೆ 9341353399, ಪಾಂಡೇಶ್ವರ, ಮಂಗಳಾದೇವಿ, ಹೊಯಿಗೆಬಜರ್, ಅತ್ತಾವರ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ವಿಶಾಲ್‍ನಾಥ್ ಎ.ಇ.ಇ. ಮಂಗಳೂರು, ಮೊಬೈಲ್ ಸಂಖ್ಯೆ 8660114664.

ಅಂಗಾರಗುಂಡಿ, ಬೈಕಂಪಾಡಿ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ದೇವರಾಜ್ ಎ.ಇ.ಇ. ಮಂಗಳೂರು, ಮೊಬೈಲ್ ಸಂಖ್ಯೆ 7411832998, ಕುಲಶೇಖರ್, ಬಿಕರ್ನಕಟ್ಟೆ, ವಾಮಂಜೂರು ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಅಬ್ದುಲ್ ರೆಹಮನ್ ಎ.ಇ.ಇ. ಮಂಗಳೂರು, ಮೊಬೈಲ್ ಸಂಖ್ಯೆ 7760177377, ಕೊಟ್ಟಾರ ಚೌಕಿ ಪ್ರದೇಶಕ್ಕೆ ನೋಡಲ್ ಅಧಿಕಾರಿಯಾಗಿ ಪ್ರತಾಪ್ ಸಹಾಯಕ ನಿರ್ದೇಶಕರು ಕೈಗಾರಿಕೆ ಮತ್ತು ಬಾಯ್ಲರ್ ಮಂಗಳೂರು, ಮೊಬೈಲ್ ಸಂಖ್ಯೆ 8105733519, ಅದ್ಯಪ್ಪಾಡಿ, ಮಳವೂರು, ಬಜ್ಪೆ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಎ. ರಘು ಇ.ಓ ತಾಲೂಕು ಪಂಚಾಯತ್ ಮಂಗಳೂರು, ಮೊಬೈಲ್ ಸಂಖ್ಯೆ 9480862110.

Also Read  ಮಂಗಳೂರು: ವಾಹನಗಳಲ್ಲಿ ಪ್ರಖರ ಎಲ್ಐಡಿ ಲೈಟ್ ಬಳಕೆ 1170 ಪ್ರಕರಣ ದಾಖಲು, 5.86 ಲಕ್ಷ ರೂ. ದಂಡ.!

 

ಆನೆಗುಂಡಿ, ಅಳಕೆ, ಬಿಜೈ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಮಧು ಪರಿಸರ ಅಭಿಯಂತರರು ಎಮ್.ಸಿ.ಸಿ ಮಂಗಳೂರು ಮೊಬೈಲ್ ಸಂಖ್ಯೆ 9886403029, ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ ಪ್ರದೇಶಗಳಿಗೆ ನೋಡಲ್ ಅಧಿಕಾರಿಯಾಗಿ ಶ್ರೀನಿವಾಸ್ ಮೂರ್ತಿ ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ್ ಉಳ್ಳಾಲ ಮೊಬೈಲ್ ಸಂಖ್ಯೆ 9480061446, ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯಲ್ಲಿ ಆಯಾ ಪ್ರದೇಶಗಳಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಲು ಅಪರ ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

error: Content is protected !!
Scroll to Top