ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.13. ಈ ವರ್ಷದ ಮಳೆಗಾಲ ಆರಂಭಗೊಂಡಿದ್ದು, ಕಳೆದ ಒಂದೆರಡು ದಿನದಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಕಡಬ ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳು ಕೆಸರುಮಯಗೊಂಡು ವಾಹನ ಸವಾರರು ಸಂಕಷ್ಟಪಡುತ್ತಿದ್ದಾರೆ.


ಕಡಬ-ಕಲ್ಲುಗುಡ್ಡೆ ಸಂಪರ್ಕ ಕಲ್ಪಿಸುವ ರಸ್ತೆಯ ಕಡಬ ಹಳೆಸ್ಟೇಷನ್‍ನಿಂದ ಕಾಯರಡ್ಕ ವರೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು, ನೀರು ನಿಂತು ಕೆಸರುಮಯಗೊಂಡಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದು, ಅಪಾಯದ ಸ್ಥಿತಿ ತಂದೊಡ್ಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಸ್ತೆಯಲ್ಲಿ ಉಂಟಾಗಿರುವ ಹೊಂಡ ಗುಂಡಿಗಳನ್ನು ಸರಿಪಡಿಸಿ, ರಸ್ತೆಯಲ್ಲಿ ನೀರು ನಿಲ್ಲದಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Also Read  ಅರಂತೋಡು: ಸ್ವಚ್ಚತಾ ಅಭಿಯಾನ

error: Content is protected !!
Scroll to Top