ಜಗನ್ ರೆಡ್ಡಿಯನ್ನು ವಿಜಯವಾಡದಲ್ಲಿ ಭೇಟಿಯಾದ ನಿಖಿಲ್ ಕುಮಾರಸ್ವಾಮಿ➤ಜೆಡಿಎಸ್ ಯುವ ನಾಯಕನಿಗೆ ಸಿಕ್ತು ಆಂಧ್ರ ಸಿ.ಎಂನಿಂದ ಸಲಹೆ

(ನ್ಯೂಸ್ ಕಡಬ) newskadaba.com ಮಂಡ್ಯ, ಜೂನ್.13. ಈ ಬಾರಿ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅಂಬರೀಷ್​ ವಿರುದ್ಧ ಸೋತಿದ್ದ ಜೆಡಿಎಸ್​ನ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರನ್ನು ವಿಜಯವಾಡದಲ್ಲಿ ಭೇಟಿಯಾಗಿ ಸಿಎಂ ಸ್ಥಾನ ಅಲಂಕರಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು.

ಆಂಧ್ರದಲ್ಲಿ ಜಗನ್​ ಅಣ್ಣಾ ಎಂದೇ ಅವರು ಪರಿಚಿತರಾಗಿದ್ದಾರೆ. ಅವರ ಹತ್ತು ವರ್ಷಗಳ ಸುದೀರ್ಘ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಹಾಗೇ ಜಗನ್​ ಮೋಹನ್​ ರೆಡ್ಡಿಯವರು ಕರ್ನಾಟಕ ರಾಜಕಾರಣವನ್ನು, ಇಲ್ಲಿನ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗೆಂದು ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ.

Also Read  ಗುಂಡೇಟಿಗೆ ಕಾಡೆಮ್ಮೆ ಬಲಿ..!

ಸಾರ್ವಜನಿಕ ಜೀವನದಲ್ಲಿ ಯಾವುದಕ್ಕೂ ಹಿಂಜರಿಯದೆ ಜನಸೇವೆಯನ್ನೇ ಗುರಿಯಾಗಿಟ್ಟುಕೊಂಡು ಮುಂದುವರಿಯಲು ಸಲಹೆ ನೀಡಿದರು. ಅಲ್ಲದೆ ರಾಜಕೀಯದಲ್ಲಿ ಉತ್ತಮ ಭವಿಷ್ಯ ಹೊಂದುವಂತೆ ಹಾರೈಸಿದರು ಎಂದು ಈ ಬಗ್ಗೆ ಫೇಸ್​ಬುಕ್​ನಲ್ಲಿ ನಿಖಿಲ್ ಕುಮಾರಸ್ವಾಮಿ ತಮ್ಮ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿಯವರನ್ನು ಭೇಟಿಯಾದ ಬಗ್ಗೆ ತಿಳಿಸಿದ್ದಾರೆ.

error: Content is protected !!
Scroll to Top