‘ಆಧುನಿಕ ಭಾರತದಲ್ಲಿ ಗಾಂಧೀಜಿಯ ಪರಂಪರೆ’➤ಫೋಟೋಗ್ರಾಫಿ ಸ್ಪರ್ಧೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.13.ಭಾರತೀಯ ಅಂಚೆ ಇಲಾಖೆಯು ಫೋಟೋಗ್ರಾಫಿ ಸ್ಪರ್ಧೆಯನ್ನು ‘ಆಧುನಿಕ ಭಾರತದಲ್ಲಿ ಗಾಂಧೀಜಿಯ ಪರಂಪರೆ’ ಎಂಬ ವಿಷಯದಲ್ಲಿ ಎಲ್ಲಾ ಭಾರತೀಯರಿಗಾಗಿ ಏರ್ಪಡಿಸಿದೆ. ಫೋಟೊ ಸ್ವಂತದ್ದಾಗಿದ್ದು , ಕೇವಲ ಒಂದು ಫೋಟೋವನ್ನು ಮಾತ್ರ ಕಳುಹಿಸಬಹುದು.

ಫೋಟೋದ ಹಾರ್ಡ್ ಕಾಪಿ ಜೊತೆಗೆ CD ಯನ್ನು “Independence Day 2019- Photography Competition”ಎಂದು ಲಕೋಟೆಯ ಮೇಲೆ ಬರೆದು “Speed Post” ಮುಖಾಂತರ ಜೂನ್ 30 ರ ಒಳಗೆ ತಲುಪುವಂತೆ “ADG,Room No :108,Dak Bhawan,Parliament Street,New Delhi -110001 ವಿಳಾಸಕ್ಕೆ ಕಳುಹಿಸಬೇಕು. ಡಿಸೈನ್ ಹಿಂದುಗಡೆ ಹೆಸರು ,ವಯಸ್ಸು, ಲಿಂಗ, ವಿಳಾಸ, ಮೊಬೈಲ್ ನಂಬರ್,ದಿನಾಂಕ ಹಾಗೂ ಫೋಟೋದ ಡೀಟೈಲ್ಸ್ ಹಾಗೂ ಕ್ಯಾಮೆರಾ ಮಾಡೆಲ್‍ನ್ನು ನಮೂದಿಸಬೇಕು.

Also Read  ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಅರ್ಜಿ ಆಹ್ವಾನ

ಬಹುಮಾನದ ಮೊತ್ತವು ಪ್ರಥಮ ರೂs.50000/-, ದ್ವಿತೀಯ ರೂ 25000/-ತೃತೀಯ ರೂ 10000/- ಬಹುಮಾನಗಳು ಹಾಗೂ 5000/- ರೂಪಾಯಿಗಳ 5 ಸಮಾಧಾನಕರ ಬಹುಮಾನಗಳನ್ನು ಒಳಗೊಂಡಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ www.indiapost.gov.in ಸಂಪರ್ಕಿಸಬೇಕು ಎಂದು ಹಿರಿಯ ಅ0ಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top