ಎನ್ ಡಿ ಆರ್ ಎಫ್ ಮತ್ತು ಜಿಲ್ಲಾಡಳಿತದ ಪ್ರಕೃತಿ ವಿಕೋಪ ಘಟಕ ➤ಜಂಟಿಯಾಗಿ ಭೂಕುಸಿತವಾದರೆ ನಿರ್ವಹಣೆ ಕುರಿತು ಅಣಕು ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.13.ಜೂನ್ 19ರಂದು ವಿಮಾನ ನಿಲ್ದಾಣದ ಸಮೀಪದ ಅದ್ಯಪಾಡಿ ಬಳಿ ಎನ್‍ಡಿಆರ್‍ಎಫ್ ಮತ್ತು ಜಿಲ್ಲಾಡಳಿತದ ಪ್ರಕೃತಿ ವಿಕೋಪ ಘಟಕ ಜಂಟಿಯಾಗಿ ಭೂಕುಸಿತವಾದರೆ ನಿರ್ವಹಣೆ ಸಂಬಂಧ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಸುತ್ತಮುತ್ತಲ ನಾಗರೀಕರು ಭಯಭೀತರಾಗಬಾರದು ಎಂದು ಅಪರ ಜಿಲ್ಲಾಧಿಕಾರಿ ಆರ್. ವೆಂಕಟಚಲಾಪತಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇಂದು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‍ನಲ್ಲಿ ‘ಪ್ರಕೃತಿ ವಿಕೋಪ ಹಾಗೂ ಪ್ರವಾಹಗಳ ನಡೆದ ಸಂದರ್ಭ ನಿರ್ವಹಣೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಅಣಕು ಪ್ರದರ್ಶನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಣಕು ಕಾರ್ಯಾಚರಣೆ ಹೊಣೆಗಾರಿಕೆ ಹಾಗೂ ಯೋಜನೆ ರೂಪಿಸಲು ಸಹಾಯಕ ಆಯುಕ್ತರು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ವಿಜಯ್ ಅವರಿಗೆ ಸೂಚಿಸಿದರು.ಅಣಕು ಪ್ರದರ್ಶನದ ನೋಡಲ್ ಅಧಿಕಾರಿಯಾಗಿ ಸಹಾಯಕ ಆಯುಕ್ತರಾದ ರವಿಚಂದ್ರ ನಾಯಕ್ ಅವರು ವಹಿಸಲಿದ್ದು, ಕಾರ್ಯಾನುಷ್ಟಾನವನ್ನು ಮುಖ್ಯ ಅಗ್ನಿಶಾಮಕ ಅಧಿಕಾರಿಗಳಿಗೆ ನೀಡಲಾಗಿದೆ.

Also Read  ವಿಟ್ಲ: ಆಕಸ್ಮಿಕ ಕಾಲು ಜಾರಿ ಬಿದ್ದು ವ್ಯಕ್ತಿ ಮೃತ್ಯು

ರಕ್ಷಣಾ ಹೊಣೆಯನ್ನು ಎನ್ ಡಿ ಆರ್ ಎಫ್ ಮತ್ತು ಹೋಂ ಗಾರ್ಡ್‍ನವರಿಗೆ ನೀಡಲಾಗಿದೆ. ಸಂಪರ್ಕ ಅಧಿಕಾರಿಯಾಗಿ ವಿಜಯಕುಮಾರ್ ಕರ್ತವ್ಯ ನಿರ್ವಹಿಸುವರು.ಲೋಕೋಪಯೋಗಿ, ಕೈಗಾರಿಕಾ ಇಲಾಖೆ, ಆರ್ ಟಿ ಒ ಅವರಿಗೆ ವಿವಿಧ ಹೊಣೆಗಾರಿಕೆಯನ್ನು ವಹಿಸಲು ಸೂಚನೆ ನೀಡಲಾಯಿತು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣರಾವ್ ಅವರಿಗೆ ಪ್ರಥಮ ಚಿಕಿತ್ಸೆ ಮತ್ತು ಆಂಬುಲೆನ್ಸ್ ನಿರ್ವಹಣೆಗೆ ಹೊಣೆ ವಹಿಸಲಾಯಿತು. ರೆಡ್ ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷರಾದ ಪ್ರಭಾಕರ ಶರ್ಮಾ ಅವರು ಸ್ವಯಂಸೇವಕರನ್ನು ನೀಡುವ ಹೊಣೆಯನ್ನು ನಿರ್ವಹಿಸುವುದಾಗಿ ಹೇಳಿದರು. ಎನ್ ಡಿ ಆರ್ ಎಫ್‍ನ ಇನ್ಸ್‍ಪೆಕ್ಟರ್ ಕೇಶವ ಅವರು ಪಿಪಿಟಿ ಮೂಲಕ ಕಾರ್ಯಪಡೆಯ ಕಾರ್ಯವೈಖರಿ ಅವರಲ್ಲಿರುವ ಮೂಲಸೌಕರ್ಯಗಳ ಬಗ್ಗೆ ವಿವರಿಸಿದರು.

Also Read  ನ್ಯೂ ಅಕ್ಷರದೇವಿ ಫ್ಯಾನ್ಸಿ ಮತ್ತು ಟೈಲರಿಂಗ್ ಶುಭಾರಂಭ

error: Content is protected !!
Scroll to Top