ಜೆಪ್ಪು ಕುಡುಪ್ಪಾಡಿ ವಿವಾಹಿತ ಮಹಿಳೆ ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.12. ಬೋಳಂತೂರು ನಿವಾಸಿ ಎಸ್‌.ಪಿ. ಶರೀಫ್‌ ಅವರು ಸಲೀಮಾ ಅವರನ್ನು 9 ವರ್ಷಗಳ ಹಿಂದೆ ಮದುವೆಯಾಗಿದ್ದು ಮೂರು ಮಕ್ಕಳಿದ್ದಾರೆ.

ಸಲೀಮ ಅವರು ಹೆಚ್ಚಾಗಿ ತಾಯಿ ಮನೆಯಲ್ಲಿ ವಾಸವಾಗಿದ್ದು, ಶರೀಫ್‌ ಅವರು ಮೇ 2ರಂದು ಮಕ್ಕಳೊಂದಿಗೆ ಸಲೀಮ ಅವರನ್ನು ಭೇಟಿಯಾಗಲು ಬಂದಾಗ ಅಲ್ಲಿ ಆಕೆ ಇರಲಿಲ್ಲ.ಆಕೆಯ ತಾಯಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಒಂದು ತಿಂಗಳ ಹಿಂದೆಯೇ ಮನೆಯಿಂದ ಹೋಗಿರುವುದಾಗಿ ತಿಳಿಸಿದ್ದು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.ಕಾಣೆಯಾದವ್ಯಕ್ತಿಯ ಚಹರೆ ಇಂತಿದೆ. 5 ಅಡಿ ಎತ್ತರವಿದ್ದು ಕನ್ನಡ, ಹಿಂದಿ, ಇಂಗ್ಲಿಷ್‌, ಮಲಯಾಳಿ ಭಾಷೆ ಮಾತನಾಡುತ್ತಾರೆ. ಈಕೆ ಪತ್ತೆಯಾದಲ್ಲಿ ಪಾಂಡೇಶ್ವರ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ.ನಗರದ ಜೆಪ್ಪು ಕುಡುಪ್ಪಾಡಿ ನಿವಾಸಿ ಸಲೀಮಾ (27) ನಾಪತ್ತೆಯಾಗಿರುವ ಬಗ್ಗೆ ನಗರದ ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ಜನರ ಸಹಕಾರದಿಂದ ಪ್ಲಾಸ್ಟಿಕ್ ನಿಷೇಧ ಸಾಧ್ಯ

error: Content is protected !!
Scroll to Top