(ನ್ಯೂಸ್ ಕಡಬ) newskadaba.com ಕಡಬ, ಜೂನ್.12.ದ.ಕ ಜಿಲ್ಲಾ ಪಂಚಾಯತ್ ಪುತ್ತೂರು ತಾಲೂಕು , ಕಡಬ ಗ್ರಾ.ಪಂ ಹಾಗೂ ಕಡಬ ಪ.ಪೂ. ಕಾಲೇಜಿನ ಸೇವ ಯೋಜನೆಯ ಸಹಯೋಗದಲ್ಲಿ ಜೂ. 11 ರಂದು ಕಡಬ ಪೇಟೆಯಾದ್ಯಂತ ಸ್ವಚ್ಚಮೇವ ಜಯತೇ ಜನಾಂದೋಲನ ಜಾಥಾ ನಡೆಯಿತು.
ಕಡಬ ಗ್ರಾ.ಪಂ ವಠಾರದಲ್ಲಿ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರರವರು ಬಿತ್ತಿ ಪತ್ರಗಳನ್ನು “ರಾಷ್ಟ್ರೀಯ ಸೇವಾ ಯೋಜನೆ”ಯ ಶಿಬಿರಾರ್ಥಿಗಳಿಗೆ ಹಂಚುವ ಮೂಲಕ ಚಾಲನೆ ನೀಡಿ “ಸ್ವಚ್ಚ ಗ್ರಾಮ ಪಂಚಾಯತ್” ಕಾರ್ಯಕ್ರಮಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಡಬ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆ ಪ್ರಾಸ್ತವಿಕವಾಗಿ ಮಾತನಾಡಿ ನಮ್ಮ ಮನೆ, ಪರಿಸರ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚವಾಗಿಡುವ ಮೂಲಕ ಸರಕಾರದ ಯೋಜನೆಯಾಗಿರುವ “ಸ್ವಚ್ಚಮೇವ ಜಯತೇ” ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆನೀಡಿದರು.
ಪ.ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಸಲೀನ್ ಕೆ.ಪಿ ಹಾಗೂ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಉಪನ್ಯಾಸಕ ಹರಿಶಂಕರ್ ಭಟ್ ಸ್ವಚ್ಚತೆ ಬಗ್ಗೆ ಮಾತನಾಡಿದರು. ಗ್ರಾ.ಪಂ ಕಾರ್ಯದರ್ಶಿ ಸಂತೋಷ್ ಪ್ರತಿಜ್ಞಾ ವಿಧಿ ಭೋದಿಸಿದರು. ಗ್ರಾ.ಪಂ ಅಬಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಸ್ವಾಗತಿಸಿ , ಕಾರ್ಯದರ್ಶಿ ಸಂತೋಷ್ ವಂದಿಸಿದರು. ಹರೀಶ್ ಬೆದ್ರಾಜೆ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಪದ್ಮಯ್ಯ, ವಾರಿಜ, ಶಶಿಕಲಾ, ಗುರುರಾಜ್ ಭಟ್, ಕೀರ್ತನ್, ರಿಯಾಜ್, ಶಮಿನಾ, ಸಹಕರಿಸಿದರು. ಗ್ರಾ.ಪಂ ಸದಸ್ಯರಾದ ರೇವತಿ, ಹರ್ಷ ಕೋಡಿ, ಸೇರಿದಂತೆ ಹಳೆ ವಿದ್ಯಾರ್ಥಿಗಳು, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.