ಅಂಚೆ ಗ್ರಾಹಕ ವೇದಿಕೆ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.12.ಮಂಗಳೂರು ವಿಭಾಗೀಯ ಮಟ್ಟದ ಅಂಚೆ ಗ್ರಾಹಕ ವೇದಿಕೆಯ ಸಭೆಯು ಜೂನ್ 8 ರಂದು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು ಪ್ರತಿನಿಧಿಗಳು ಹಾಗೂ ಹಲವಾರು ಅಂಚೆ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಅಂಚೆ ಕಚೇರಿಗಳಲ್ಲಿ ಗುಣಮಟ್ಟದ ಸೇವೆ, ಗ್ರಾಹಕರಿಗೆ ಬೇಕಾಗಿರುವ ವಿವಿಧ ಸೌಲಭ್ಯಗಳು ಹೊಸ ಸೇವೆಗಳ ಸಾಧ್ಯತೆಯು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಗ್ರಾಹಕರ ವೇದಿಕೆಯ ಸದಸ್ಯರು ಸೂಕ್ತ ಸಲಹೆಯನ್ನು ನೀಡಿದರು. ಗ್ರಾಹಕರ ಅಗತ್ಯತೆಗಳನ್ನು ಟರ್ಥ ಮಾಡಿಕೊಂಡು ಅದಕ್ಕೆ ಸೂಕ್ತವಾಗಿ ಸ್ಪಂದಿಸುವಲ್ಲಿ ಅಂಚೆ ಗ್ರಾಹಕರ ವೇದಿಕೆಯು ಒಂದು ಪರಿಣಾಮಕಾರಿ ವ್ಯವಸ್ಥೆ.

Also Read  ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಶ್ವ ಗೂಬೆ ಜಾಗೃತಿ ದಿನಾಚರಣೆ ➤ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ

ಆ ನಿಟ್ಟಿನಲ್ಲಿ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಂಚೆ ವೇದಿಕೆಯ ಎಲ್ಲಾ ಸದಸ್ಯರ ಅತ್ಯುತ್ತಮ ಪಾಲ್ಗೋಳ್ಳುವಿಕೆ ಶ್ಲಾಘನೀಯ ಎಂದು ಪೋಸ್ಟ್ ಮಾಸ್ಟರ್ ಜನರಲ್ ಶಿರ್ತಾಡಿ ರಾಜೇಂದ್ರ ಕುಮಾರ್ ಅವರು ತಿಳಿಸಿದರು.ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇರಿದಂತೆ ತಂತ್ರಜ್ಞಾನ ಆಧಾರಿತ ನೂತನ ಸೇವೆಗಳ ಬಗ್ಗೆ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀಹರ್ಷ ಅವರು ಮಾಹಿತಿ ನೀಡಿದರು. ಅಂಚೆ ಗ್ರಾಹಕ ವೇದಿಕೆಯ ಸದಸ್ಯರಾದ ಕೆ ಸುರೇಂದ್ರ ಪ್ರಭು, ಅಣ್ಣಪ್ಪ ಪೈ ಎಮ್, ಎ ಕೆ ಭಂಡಾರಿ, ಗೌರವ್ ಹೆಗ್ಡೆ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!
Scroll to Top