ಅಕ್ರಮ ಮರ ಸಾಗಟ ಮಾಡುತ್ತಿದ್ದ ವಾಹನ ಪತ್ತೆ➤ಸೊತ್ತುಗಳ ವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.12.ಜೂನ್ 6 ರಂದು ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಕೈಕಂಬ ಎನ್‍ಹೆಚ್-169 ರಸ್ತೆ ಬದಿಯಲ್ಲಿ ಅಕ್ರಮವಾಗಿ 407 ಟೆಂಪೋ ವಾಹನ ನೋಂದಾಣಿ ಸಂಖ್ಯೆ:ಕೆಎ-19ಎಡಿ-3699ರಲ್ಲಿ ರಹದಾರಿ ರಹಿತವಾಗಿ ದಿಮ್ಮಿ ಮತ್ತು ಎಳಗಳನ್ನು ಸಾಗಾಟದ ಮಾಡಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸಾಗಾಟ ಮಾಡಿದ 12 ದಿಮ್ಮಿಗಳಿಂದ 1.523 ಘ.ಮೀ ಮೋಪುಗಳನ್ನು ಮತ್ತು 10 ಎಳಗಳನ್ನುವಶಪಡಿಸಿಕೊಳ್ಳಲಾಗಿದೆ.

ಸರಕಾರ ಪರವಾಗಿ ಅಮಾನತು ಪಡಿಸಿ ವಾಹನ ಚಾಲಕ ಗಣೇಶ್, ಬಿನ್. ಜಾರಪ್ಪ ಪೂಜಾರಿ, ಮಾರೂರು ಗ್ರಾಮ, ಮೂಡಬಿದ್ರೆ ತಾಲೂಕು ಇವರನ್ನು ಬಂಧಿಸಿ ಮುಚ್ಚಳಿಕೆ ಪತ್ರದ ಮೂಲಕ ಬಿಡುಗಡೆಗೊಳಿಸಲಾಗಿದೆ. ಸದ್ರಿ ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಯವರಾದ ಕೆ. ಸುಧೀರ್ ಅರಣ್ಯ ರಕ್ಷಕರಾದ ಅಭಿಜೀತ್ ಬಿ.ಜಿ, ಇವರು ನಡೆಸಿರುತ್ತಾರೆ.

Also Read  ಉಡುಪಿಗೆ ತಟ್ಟದ ಸಾರಿಗೆ ನೌಕರರ ಬಿಸಿ ➤ ಎಂದಿನಂತೆ ಬಸ್ ಸಂಚಾರ

ಸದ್ರಿ ಪ್ರಕರಣದ ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ, ಮಂಗಳೂರು ಡಾ: ಕರಿಕಲನ್, ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇ ಗೌಡ, ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು, ಮಂಗಳೂರು ಇವರ ನಿರ್ದೇಶನದಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್‍ರವರು ನಡೆಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top