ಸೂರದಾಸಜಯಂತಿ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸ್ಕೂಲ್‍ಕಿಟ್ ವಿತರಣೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.10.ವಿಕಲಚೇತನರ ಬದುಕಿಗೆ ಸದಾ ನೆರವಾಗುವುದು ನಮ್ಮೆಲ್ಲರಕರ್ತವ್ಯ. ತಾವು ವಂಚಿತರಲ್ಲ ಎಂಬ ಭಾವನೆಅವರಲ್ಲಿಮನೆ ಮಾಡಬೇಕು ಹಾಗೂ ಕ್ಷಣಕ್ಷಣವೂಅವರಲ್ಲಿಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ನಾವು ಮಾಡುತ್ತಾಇರಬೇಕು, ಇದುದೇವರ ಕೆಲಸ ಎಂದು ತಿಳಿಯಬೇಕು ಎಂದು ವಿಧಾನ ಸಭಾ ಸದಸ್ಯ ಶ್ರೀ ವೇದವ್ಯಾಸಕಾಮತ್ ನುಡಿದರು.

ಎಂಡೋ ಸಲ್ಫಾನ್‍ಗೆ ಬಲಿಯಾಗಿರುವಕರ್ನಾಟಕದ ಮಂದಿಗೆ ನಾನು ಸರಕಾರದ ವತಿಯಿಂದಏನೆಲ್ಲ ಸೌಲಭ್ಯಒದಗಿಸಲು ಸಾಧ್ಯವೋಅದನ್ನು ಪ್ರಾಮಾಣಿಕವಾಗಿ ಮಾಡುವ ಪ್ರಯತ್ನ ಮಾಡುತ್ತೇನೆಎಂದುಅವರು ಭರವಸೆ ನೀಡಿದರು.ಜೂನ್ 9 ರಂದು ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯಲ್ಲಿಟೆಕ್ಸಸ್‍ಇನ್ಸ್ಟ್ರುಮೆಂಟ್ ಬೆಂಗಳೂರು, ಸಕ್ಷಮದ.ಕಜಿಲ್ಲಾಘಟಕ ಹಾಗೂ ಮಂಗಳೂರು ಪ್ರಾದೇಶಿಕ ಹಿಂದಿ ಪ್ರಚಾರ ಸಮಿತಿಯ ಸಂಯುಕ್ತಆಶ್ರಯದಲ್ಲಿಜರಗಿದ ಸೂರದಾಸಜಯಂತಿ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸ್ಕೂಲ್‍ಕಿಟ್ ವಿತರಣೆಯಕಾರ್ಯಕ್ರಮದಲ್ಲಿಅವರು ಮುಖ್ಯಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

Also Read  ದ.ಕ, ಉಡುಪಿಯ ಹಲವು ಮಸೀದಿಗಳಲ್ಲಿ ಗ್ರಹಣ ನಮಾಝ್

ಜಿಲ್ಲಾ ಮಟ್ಟದಿಂದ ಆಗಮಿಸಿದ ಸುಮಾರು120 ಮಂದಿ ದಿವ್ಯಾಂಗ ವಿದ್ಯಾರ್ಥಿಗಳಿಗೆ ಸ್ಕೂಲ್‍ಕಿಟ್ ವಿತರಣೆ ಮಾಡಲಾಯಿತು.ಆರಂಭದಲ್ಲಿ ಸಕ್ಷಮ

ರಾಜ್ಯಘಟಕದ ಸಂಘಟನಾ ಕಾರ್ಯದರ್ಶಿ ಜಯರಾಮ ಬೊಳ್ಳಾಜೆಅವರು ದೀಪಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಮ್ಮದುಡಿಮೆಯಒಂದು ಸಣ್ಣ ಪಾಲನ್ನು ದಿವ್ಯಾಂಗರಿಗಾಗಿ ಮೀಸಲಾಗಿಟ್ಟುಜೀವನದಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳಬೇಕೆಂದು ಅವರುಕರೆಯಿತ್ತರು. ಸಕ್ಷಮದ.ಕಜಿಲ್ಲಾಘಟಕದಅಧ್ಯಕ್ಷಡಾ. ಮುರಳೀಧರ ನಾೈಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತ ಬಯಸಿದರು.

ಶಕ್ತಿ ಎಜುಕೇಶನ್‍ಟ್ರಸ್ಟ್‍ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ಸೂರದಾಸರಜೀವನ ಮತ್ತು ಕೃತಿಗಳ ಬಗ್ಗೆ ಮಾತನಾಡುತ್ತಾ ಹುಟ್ಟುಕುರುಡರಾಗಿದ್ದರೂ ಸೂರದಾಸರುಜಗತ್ತಿಗೆ ಬೆಳಕು ನೀಡುವ ಶ್ರೇಷ್ಠ ಕೃತಿಗಳನ್ನು ರಚಿಸಿ ಅಮರರಾಗಿದ್ದಾರೆಎಂದರು.ಹಿಂದಿ ಪ್ರಚಾರ ಸಮಿತಿಯಉಪಾಧ್ಯಕ್ಷ ಪ್ರೊ | ಶ್ರೀಧರ ಭಟ್, ಸಕ್ಷಮರಾಜ್ಯಉಪಾಧ್ಯಕ್ಷ ವಿನೋದ್ ಶೆಣೈ,ಟೆಕ್ಸಾಸ್‍ಇನ್ಸ್ಟ್ರುಮೆಂಟ್‍ನ ಮೋಯಿಸ್ ಹಾಗೂ ವರುಣ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ಸಮಿತಿಯ ಕಾರ್ಯದರ್ಶಿ ರತ್ನಾವತಿಜೆ. ಬೈಕಾಡಿ ವಂದಿಸಿದರು.

Also Read  ಕಡಬ: ಸರಸ್ವತೀ ವಿದ್ಯಾಲಯ ಪ್ರೌಢಶಾಲೆಯ ಮಂತ್ರಿಮಂಡಲ ರಚನೆ

error: Content is protected !!
Scroll to Top