ಚರಂಡಿ ಹೂಳು ತುಂಬಿ ಕೊಳಚೆ ನೀರಿನ ಹರಿವಿಗೆ ತೊಡಕು➤ಮಾರಕ ರೋಗಗಳ ಉತ್ಪತ್ತಿ ಕೇಂದ್ರವಾಗಿ ಪರಿವರ್ತನೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂನ್.10. ದಿನನಿತ್ಯ ಸಾವಿರಾರು ಮಂದಿ ಸಂಚರಿಸುವ ರಸ್ತೆ ಪಕ್ಕದಲ್ಲೆ ಕೊಳಚೆ ನೀರು ಗಬ್ಬೆದ್ದು ನಾರುತ್ತಿದೆ. ಮಾರಕ ರೋಗಗಳಿಗೆ ಆಸ್ಪದ ನೀಡುವ ಚರಂಡಿಯ ಕೊಳಚೆ ನೀರನ್ನು ನಿಲ್ಲಲು ಬಿಡದೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ.

ಇಲ್ಲದಿದ್ದರೆ ಮಳೆಗಾಲದಲ್ಲಿ ಚರಂಡಿನೀರು ಕಟ್ಟಿಕೊಂಡು ಕೃತಕ ನೆರೆ ಉಂಟಾಗಿ, ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ, ಅಂಗಡಿ ಮಾಲಕರಿಗೆ ತೊಂದರೆ ಆಗಲಿದೆ. ಮುಂಗಾರು ಆರಂಭದ ಮೊದಲೇ ಕೆಲ ಭಾಗಗಳಲ್ಲಿ ಮಲೇರಿಯಾ, ಡೆಂಗ್ಯೂ, ಚಿಕೂನ್‌ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಇಂತಹ ರೋಗಗಳ ಹರಡುವಿಕೆಗೆ ಮೂಲ ಕಾರಣ ಈ ತಗ್ಗು ಪ್ರದೇಶಗಳಲ್ಲಿ ನಿಲ್ಲುವ ಕೊಳಚೆ ನೀರುಗಳು, ಚರಂಡಿ ನೀರು.ಆರೋಗ್ಯ ಇಲಾಖೆ, ಇತ್ತ ಗಮನಹರಿಸುವ ಬೇಕಿದೆ.ಮಳೆಗಾಲದಲ್ಲಿ  ಸಾಂಕ್ರಾಮಿಕ ರೋಗಗಳ ಹಾವಳಿ ಜೋರಾಗುತ್ತದೆ.ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕಾಗಿದೆ.

Also Read  ಮಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ನೇಮಕ      

error: Content is protected !!
Scroll to Top