ಬೈಕ್ ಮತ್ತು ಟ್ರಕ್ ನಡುವೆ ಡಿಕ್ಕಿ➤ಇಬ್ಬರು ವಿದ್ಯಾರ್ಥಿಗಳ ದುರ್ಮರಣ

(ನ್ಯೂಸ್ ಕಡಬ) newskadaba.com ಉಡುಪಿ, ಜೂನ್.10. ಜೂ.8ರಂದು ರಾತ್ರಿ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ಮೊರಬ ಗ್ರಾಮದ ಬಳಿ ವಿದ್ಯಾರ್ಥಿಗಳಾಗಿದ್ದ ನಾಲ್ವರು ಗೆಳೆಯರು ಎರಡು ಬೈಕ್‌ಗಳಲ್ಲಿ ಮಣಿಪಾಲ ದಿಂದ ಗೋವಾಕ್ಕೆ ತೆರಳುತ್ತಿದ್ದವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪಪಿರುವ ಘಟನೆ ಸಂಭವಿಸಿದೆ.

ಅಂಕೋಲದಿಂದ ಮಂಗಳೂರಿಗೆ ಬರುತ್ತಿದ್ದ ಟ್ರಕ್‌ ಬೇರೊಂದು ವಾಹನವನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಬೈಕಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಈ ಬೈಕಿನಲ್ಲಿದ್ದ ಶಯನ್‌ ಶೆಟ್ಟಿ ಮತ್ತು ಆರ್ಥಿಕ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೂಂದು ಬೈಕಿನಲ್ಲಿದ್ದ ಉಡುಪಿಯ ಅಭಿಷೇಕ್‌ ಮತ್ತು ಕಲ್ಮಾಡಿಯ ಪವನ್‌ ಕುಮಾರ್‌ ಅವರಿದ್ದರು.ಅಪಘಾತದ ತೀವ್ರತೆಗೆ ಬೈಕ್‌ 3 ಪಲ್ಟಿ ಹೊಡೆದಿತ್ತು ಹಾಗೂ ಬೈಕ್‌ ಸವಾರರು ಕೂಡ ಅತಿವೇಗದಿಂದ ಸಂಚರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕ ಮಹಾರಾಷ್ಟ್ರದ ರಾಜೇಸಾಬ ಶರಣಾಗಿದ್ದಾನೆ.

Also Read  ಇಂದು ಡಾ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ಮಹೋತ್ಸವ

ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಿದ್ಯಾರ್ಥಿಗಳು ಗೋವಾಕ್ಕೆ ಹೊರಟಿದ್ದ ವಿಷಯ ಮನೆಯಲ್ಲಿ ತಿಳಿಸದೆ ಮಣಿಪಾಲಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು ಎನ್ನಲಾಗಿದೆ.ಮೃತಪಟ್ಟ ಚಹರೆ ಇಂತಿದೆ. ಆರ್ಥಿಕ್‌ ಅವರು ರೇಖಾ ಸಾಗರಿಕ ಅವರ ಪುತ್ರನಾಗಿದ್ದರು. ಅಂಬಲಪಾಡಿಯ ಶಯನ್‌ ಶೆಟ್ಟಿ (19) ಹಾಗೂ ಬ್ರಹ್ಮಗಿರಿಯ ಆರ್ಥಿಕ್‌ ಸಾಲ್ಯಾನ್‌ (19) ಮೃತಪಟ್ಟವರು. ಶಯನ್‌ ಶೆಟ್ಟಿ ಮುಂಬಯಿಯ ಹೊಟೇಲ್‌ ಉದ್ಯಮಿ ಸತೀಶ್‌ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿಯ ಪುತ್ರ

Also Read  ಮತ್ತೆ ಕರ್ನಾಟಕದಲ್ಲಿ ಲಾಕ್ ಡೌನ್ ಇಲ್ಲ ➤ ಡಿಸಿಎಂ ಅಶ್ವತ್ಥ್ ನಾರಾಯಣ್ ಸ್ಪಷ್ಟನೆ

 

error: Content is protected !!
Scroll to Top