(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.10.ಮಳೆಯನಿರೀಕ್ಷೆಯಲ್ಲಿರುವಜನರಿಗೆಜತೆಜತೆಗೆಚಂಡಮಾರುತದಭಯಕಾಡಲಿದೆ.ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ಹೆಚ್ಚಾಗಿ ಚಂಡಮಾರುತವಾಗಲಿದೆ.
ಇದರ ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ ಗಾಳಿ-ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಪ್ರಸ್ತುತ ನಿರ್ಮಾಣವಾಗಿರುವ ವಾಯುಭಾರ ಕುಸಿತ 36 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದ್ದು, ವಾಯವ್ಯ ದಿಕ್ಕಿನತ್ತ ಚಲಿಸಲಿದೆ.ಎಂದು ಹವಾಮಾನ ವರದಿ ತಿಳಿಸಿದೆ.ಸಮುದ್ರದಿಂದ ಕಿನಾರೆಯತ್ತ ಈಗಾಗಲೇ ರಭಸವಾಗಿ ಗಾಳಿ ಬೀಸಲಾರಂಭಿಸಿದೆ.ಇದು ಮುಂದಿನ 2-3 ದಿನ ಇನ್ನಷ್ಟು ಹೆಚ್ಚಾಗಲಿದೆ.
ರವಿವಾರ ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35ರಿಂದ 45 ಕಿ.ಮೀ. ವೇಗದ ವರೆಗೆ ಗಾಳಿ ಬೀಸುತ್ತಿತ್ತು. ಸೋಮವಾರ ಗಂಟೆಗೆ 40ರಿಂದ 55 ಕಿ.ಮೀ. ವರೆಗೂ ಗಾಳಿ ಬೀಸುವ ಸಂಭವ ಇದೆ. ಮಂಗಳವಾರ ಇದರ ವೇಗ ಮತ್ತಷ್ಟು ಹೆಚ್ಚಿ 55ರಿಂದ 65 ಕಿ.ಮೀ. ಇರುತ್ತದೆ. ಕೆಲವೊಮ್ಮೆ 75 ಕಿ.ಮೀ. ವರೆಗೂ ತಲುಪುವ ಸಂಭವ ಇದೆ.ಜೂ.12ರವೇಳೆಗೆ ಕರ್ನಾಟಕ ಕರಾವಳಿಯನ್ನು ದಾಟಿ ಮಹಾರಾಷ್ಟ್ರ ಮತ್ತುಗುಜರಾತ್‌ಕರಾವಳಿಯತ್ತಚಂಡಮಾರುತಚಲಿಸಲಿದೆ.ಈಸಂದರ್ಭಗಾಳಿ70ರಿಂದ80ಕಿ.ಮೀ.ವರೆಗೆಹಾಗೂ13ರಂದು90ರಿಂದ100ಕಿ.ಮೀ.ವರೆಗೂತಲುಪಲಿದೆ.ಅನಂತರಚಂಡಮಾರುತದವೇಗಕಡಿಮೆಯಾಗಲಿದೆಎಂದುಹವಾಮಾನಇಲಾಖೆತಿಳಿಸಿದೆಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಸಾಗರ ತೀರದಲ್ಲಿ ಕಟ್ಟಚ್ಚರ ವಹಿಸಲಾಗಿದೆ.ಹಾಗೂಮಂಗಳೂರಿನಲ್ಲಿ ಉಳ್ಳಾಲ, ಸೋಮೇಶ್ವರ, ಪಣಂಬೂರುಸೇರಿದಂತೆ ಬೀಚ್ ಗಳಿಗೆ ಬರುವ ಪ್ರವಾಸಿಗರಿಗೆಪ್ರವೇಶನಿರ್ಬಂಧಿಸಲಾಗಿದೆ.ಬಲವಾದಗಾಳಿದಿನವಿಡೀ ಮುಂದುವರಿದಿತ್ತು.
ತುರ್ತುಸಮಯದಲ್ಲಿಟೋಲ್ಫ್ರೀಸಂಖ್ಯೆಬಳಕೆ
ಅರಬಬ್ಬೀ ಸಮುದ್ರದಲ್ಲಿ ವಾಯು ಭಾರ ಕುಸಿತ ಹಾಗೂ ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ತುರ್ತು ಸೇವೆಗೆ ಟೋಲ್‌ಫ್ರೀ ಸಂಖ್ಯೆ 1077 ಬಳಸಬಹುದಾಗಿದೆ. ಇದು ದಿನದ 24 ಗಂಟೆ ಕಾಲವೂ ಕಾರ್ಯಾಚರಣೆಯಲ್ಲಿರಲಿದೆ.ಇದಲ್ಲದೆವಾಟ್ಸ್‌ಆ್ಯಪ್ ಸಂಖ್ಯೆ 9483908000 ಸಂಪರ್ಕಿಸ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.ಉಡುಪಿಯ ಕಂಟ್ರೋಲ್ ರೂಂ ನಂಬರ್‌ನ್ನು ಬಳಸಬಹುದು: 0820- 2574802 /2574360