ಕುಡ್ಲ ಎಂಟರ್ಟೈನರ್ಸ್ ತಂಡದಿಂದ ನಾಳೆ ಸಿನಿಮಾ ಸ್ಟುಡಿಯೋ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ಕಿರುಚಿತ್ರಗಳಿಂದಲೇ ಕೋಸ್ಟಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕುಡ್ಲ ಎಂಟರ್ಟೈನರ್ಸ್ ತಂಡ ಇದೀಗ ಹೊಸ ಸಿನಿಮಾ ಸ್ಟುಡಿಯೋವೊಂದನ್ನು ಆರಂಭಿಸಿದೆ.ಮಂಗಳೂರಿನ ಪದವಿನಂಗಡಿಯಲ್ಲಿರುವ ದೀಕ್ಷಾಶ್ರೀ ಬಿಲ್ಡಿಂಗ್‌ನ ಒಂದನೇಮಹಡಿಯಲ್ಲಿ ಕುಡ್ಲ ಎಂಟರ್ಟೈನರ್ಸ್ ಸ್ಟುಡಿಯೋ ಇದೇ ಜೂನ್ ೯ರ ಬೆಳಿಗ್ಗೆ ೧೦ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

 

ಉದ್ಘಾಟನಾ ಸಮಾರಂಭದಲ್ಲಿ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ತುಳು ಚಲನಚಿತ್ರನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಕಾರ್‌ಡೆಕೋರ್‌ನ ಮಾಲಕರಾದ ಮುಕೇಶ್ ಹೆಗ್ಡೆ, ಐಒಸಿಎಲ್ ನಿವೃತ್ತ ಅಧಿಕಾರಿ ಸುಂದರ್ ಒ.ಎಸ್, ಉದ್ಯಮಿ ಕೃಷ್ಣ ಕೋಟ್ಯಾನ್, ವಿ೪ ನ್ಯೂಸ್‌ನ ಆಡಳಿತ ನಿರ್ದೇಶಕರಾದ ಲಕ್ಷ್ಮಣ್ ಕುಂದರ್ಸೇರಿದಂತೆ ಚಿತ್ರರಂಗದ ಹಲವು ಪ್ರಮುಖ ನಿರ್ದೇಶಕರು, ನಟ-ನಟಿಯರು ಭಾಗವಹಿಸಲಿದ್ದಾರೆ. ಈ ನೂತನ ಸ್ಟುಡಿಯೋದ ಮೂಲಕ ಮದುವೆ, ಕಾರ್ಪೋರೆಟ್, ಮ್ಯಾಟರ್ನಿಟಿ, ಬ್ಯುಸಿನೆಸ್ ಹಾಗೂ ಫ್ಯಾಷನ್ ಶೋ ಕಾರ್ಯಕ್ರಮಗಳನ್ನು ಕಲರ್‌ಫುಲ್ ಆಗಿಎಚ್.ಡಿ ಗುಣಮಟ್ಟದಲ್ಲಿ ಚಿತ್ರೀಕರಿಸಿ ಕೊಡಲಾಗುತ್ತದೆ.

Also Read  ಬಿಳಿನೆಲೆ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ SSLC ವಿದ್ಯಾರ್ಥಿಗಳ ಸಾಧನೆ ➤ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದ ವಿದ್ಯಾಪ್ರಸನ್ನ ತೀರ್ಥರು

error: Content is protected !!
Scroll to Top