ಉದರ ದರ್ಶಕ ಶಸ್ತ್ರ ಚಿಕಿತ್ಸೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ದಕ್ಷಿಣ ಕನ್ನಡ ಜಿಲ್ಲೆಯ 2019 ನೇ ಜೂನ್ ತಿಂಗಳಲ್ಲಿ ಜರುಗುವ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಸೇವೆಗಳು ಇಂತಿವೆ.

ಜೂನ್ 11 ರಂದು ಬೆಳಿಗ್ಗೆ 10 ಗಂಟೆಗೆ ಸರಕಾರಿ ಆರೋಗ್ಯ ಕೇಂದ್ರ ವಿಟ್ಲ ಮತ್ತು 12 ಗಂಟೆಗೆ ಸರಕಾರಿ ಆರೋಗ್ಯ ಕೇಂದ್ರ ಮಾಣಿ, ಜೂನ್ 14 ರಂದು ಪೂರ್ವಾಹ್ನ ಸರಕಾರಿ ಕೇಂದ್ರ ಕಡಬ, ಜೂನ್ 15 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠ, ಜೂನ್ 17 ರಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಪುತ್ತೂರು, ಜೂನ್ 18 ರಂದು ಪೂರ್ವಾಹ್ನ ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್, ತಾಲೂಕು ಆಸ್ಪತ್ರೆ ಬೆಳ್ತಂಗಡಿ, ಜೂನ್ 19 ರಂದು ತಾಲೂಕು ಆಸ್ಪತ್ರೆ ಸುಳ್ಯ.

Also Read  ಮಂಗಳೂರು: ಐದನೇ ದಿನಕ್ಕೆ ಕಾಲಿಟ್ಟ ಓಲಾ ಕಂಪೆನಿಯ ವಿರುದ್ಧ ಚಾಲಕರ ಮುಷ್ಕರ ► ಹಲವು ಹೋರಾಟಗಾರರ ಬಂಧನ

ಜೂನ್ 21 ರಂದು ತಾಲೂಕು ಆಸ್ಪತ್ರೆ ಬಂಟ್ವಾಳ, ಪ್ರಾಥಮಿಕ ಆರೋಗ್ಯ ಕೇಂದ್ರ ನಾಟೆಕಲ್, ಜೂನ್ 25 ರಂದು ಸರ್ಕಾರಿ ಆರೋಗ್ಯ ಕೇಂದ್ರ ಮೂಡಬಿದ್ರೆಯಲ್ಲಿ ನಡೆಯಲಿದೆ. ಹಾಗೂ ಪ್ರತಿ ವಾರದ ಗುರುವಾರ ಶುಕ್ರವಾರದಂದು ಲೇಡಿಗೋಷನ್ ಆಸ್ಪತ್ರೆಯಲ್ಲಿ ಉದರದರ್ಶಕ ಹಾಗೂ ಪ್ರತಿ ದಿನ (ರಜಾ ದಿನ ಹೊರತುಪಡಿಸಿ) ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top