ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ➤ಮಾಧವ ಉಲ್ಲಾಳ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.8.ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಜೂನ್ 5 ರಂದು ವನಮಹೋತ್ಸವ ಆಚರಿಸಲಾಯಿತು ಈ ವೇಳೆಗೆ ಮಾತನಾಡಿದ ಜಿಲ್ಲಾ ಕಮಾಡೆಂಟ್ ಡಾ|| ಮುರಲೀ ಮೋಹನ್ ಚೂಂತಾರುರವರು ಪ್ರತಿಯೊಬ್ಬ ಗೃಹರಕ್ಷಕರು ಒಂದು ಗಿಡದಂತೆ ಜಿಲ್ಲೆಯಲ್ಲಿರುವ ಒಂದು ಸಾವಿರ ಗೃಹರಕ್ಷಕರು ತಮ್ಮ ತಮ್ಮ ಮನೆಗಳಲ್ಲಿ, ಹತ್ತಿರದ ಸರಕಾರಿ ಶಾಲೆಯಲ್ಲಿ, ಅಂಗನವಾಡಿ, ತಮ್ಮ ಘಟಕದ ಕಚೇರಿಗಳಲ್ಲಿ ಗಿಡಗಳನ್ನು ನೆಡುವಂತೆ ತಿಳಿಸಿದರು.

ಅದಲ್ಲದೇ ಮುಂದಿನ ಒಂದು ತಿಂಗಳುಗಳ ಕಾಲ ಪ್ರತಿ ಘಟಕಗಳಲ್ಲಿ ವನಮಹೋತ್ಸವದಂತಹ ಕಾರ್ಯಕ್ರಮಗಳನ್ನು ಮಾಡಲಾಗುವುದು ಹಾಗೂ ಪ್ರತಿ ಗೃಹರಕ್ಷಕರಿಗೆ ಗಿಡಗಳನ್ನು ಬೆಳೆಸಲು ಪ್ರೇರಣೆ ನೀಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪರಿಸರವಾದಿ ಮಾಧವ ಉಳ್ಳಾಲ್ ಮಾತಾಡಿ ಗೃಹರಕ್ಷಕರ ವನಮಹೋತ್ಸವದಂತ ಕಾರ್ಯಕ್ರಮ ಶ್ಲಾಘನೀಯ ಎಂದರು. ಪರಿಸರ ರಕ್ಷಣೆ ಎನ್ನುವುದು ಬರೀ ಅರಣ್ಯ ಇಲಾಖೆಯ ಹೊಣೆಗಾರಿಕೆ ಅಲ್ಲ ಮನುಷ್ಯನ ದುರಾಸೆಯಿಂದಾಗಿ ನೆಲದಲ್ಲಿನ ಜಲ ಬತ್ತಿ ಹೋಗಿ ಭೂಮಿ ಬರಡಾಗಿದೆ.

Also Read  ಹಳಿ ದಾಟುವಾಗ ಅಂಧ ಯುವಕನೋರ್ವ ರೈಲಿಗೆ ಸಿಲುಕಿ ಮೃತ್ಯು

ವಾಯು ಮಾಲಿನ್ಯ, ಪರಿಸರ ಮಾಲಿನ್ಯ ತಡೆಯುವ ಕೆಲಸ ತುರ್ತಾಗಿ ಆಗ ಬೇಕಾಗಿದೆ ಎಂದು ಮಾಧವ ಉಲ್ಲಾಳ್ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಮಾಡೆಂಟ್ ಡಾ|| ಮುರಲೀ ಮೋಹನ್ ಚೂಂತಾರು, ಡೆಪ್ಯುಟಿ ಕಮಾಡೆಂಟ್ ರಮೇಶ್, ಪರಿಸರವಾದಿ ಮಾಧವ ಉಳ್ಳಾಲ್, ಗೃಹರಕ್ಷರಾದ ರಮೇಶ್ ಭಂಡಾರಿ, ಸನತ್ ಆಳ್ವ, ರಾಜಶ್ರೀ, ಸಂತೋಷ, ದಿವಾಕರ್, ಉಪಸ್ಥಿತರಿದ್ದರು.

error: Content is protected !!
Scroll to Top