ಭಯ ಅಥವಾ ಚಿಂತನೆಯೇ ಒಂದು ಮಾನಸಿಕ ರೋಗ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ಪ್ರತಿ ಒಬ್ಬ ಮನುಷ್ಯನು ಪರಿಪೂರ್ಣನಲ್ಲ, ಪ್ರತಿಯೊಬ್ಬರಲ್ಲೂ ಒಂದಾದರೂ ನ್ಯೂನ್ಯತೆ ಕಂಡುಬರುತ್ತದೆ ಅದನ್ನು ಅರಿತು ಬದುಕುವುದೇ ಜೀವನ ಎಂದು ಮಿಲಾಗ್ರಿಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಫಾ ಮೈಖಲ್ ಸಾಂತುಮೇಯರ್ ಹೇಳಿದರು.


ಇಂದು ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಆಡಿಟೋರಿಯಂನಲ್ಲಿ ನಡೆದ ವಿಶ್ವ ಚಿತ್ತವಿಕಲತೆ ದಿನ-2019 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು, ಮಾನವನ ಮನಸ್ಸಿನ ಒತ್ತಡದಿಂದ ಉಂಟಾಗುವ ಭಯ ಅಥವಾ ಚಿಂತನೆಯೇ ಮಾನಸಿಕ ರೋಗ! ಭಯ ಹಾಗು ಚಿಂತನೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದೆ. ಮಾನಸಿಕ ಸ್ಥಿರತೆ ಒಂದೇ ರೀತಿ ಇರುವುದಿಲ್ಲ, ಕೆಲವರಲ್ಲಿ ಕೆಲಸದ ಒತ್ತಡ ಇನ್ನೂ ಕೆಲವರಿಗೆ ವೈಯಕ್ತಿಕ ಕಾರಣಗಳಿಂದ ನಮ್ಮ ಮಾನಸಿಕ ಸ್ಥಿರತೆಯನ್ನು ಸಮಾತೊಲನದಲ್ಲಿಡಲು ಸಾಧ್ಯವಿರುವುದಿಲ್ಲ ಈಗ ಇರುವಂತಹಾ ಪೈಪೋಟಿ ಜೀವನದಲ್ಲಿ ಮನುಷ್ಯರು ತಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಾರೆ ಎಂದರು.ಮಾನವನಿಗೆ ಎಂತಹಾ ಸಂದರ್ಭದಲ್ಲೂ ಪರಿಸ್ಥಿತಿಗೆ ಹೊಂದಿಕೊಳ್ಳುವ ಮತ್ತು ದೈಹಿಕ, ಮಾನಸಿಕ ಅಥವಾ ಸಾಮಾಜಿಕ ಸವಾಲುಗಳನ್ನು ಎದುರಿಸುವ ಹಾಗೂ ಸ್ವಯಂ ನಿರ್ಧಾರ ಮಾಡುವಂತಹಾ ಸಾಮಥ್ರ್ಯ ಇದೆ.

Also Read  ಮಂಗಳೂರು: ಪೆಟ್ರೋಲ್ ಪಂಪ್ ಬಳಿ ಕಾರಿಗೆ ಹಠಾತ್ ಬೆಂಕಿ

ಚಿತ್ತವಿಕಲತೆ ಶಾಶ್ವತವಲ್ಲ, ಮಾನಸಿಕ ಖಿನ್ನತೆಗೆ ಒಳಗಾದವರನ್ನು ಸಮಾಜದಿಂದ ದೂರವಿಡದೇ, ನಮ್ಮವರಲ್ಲಿ ಒಬ್ಬರಂತೆ ನೋಡಬೇಕು, ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರಕುವಂತೆ ಮಾಡಿದಾಗ ಗುಣಮುಖರಾಗುತ್ತಾರೆ ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ ರಾಮಕೃಷ್ಣ ರಾವ್ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ದೈನಂದಿನ ಚಟುವಟಿಕೆಗಳನ್ನು ನಿಭಾಯಿಸಲು ನಮ್ಮಲ್ಲಿರುವ ಅಸಮರ್ಥತೆ ಮತ್ತು ಸಮಸ್ಯೆ, ವಿಚಿತ್ರ ಕಲ್ಪನೆಗಳು ಅಥವಾ ಭ್ರಮೆಗಳು, ಅತಿಯಾದ ಆತಂಕ ನಿರಂತರ ದುಃಖದ ಭಾವನೆಗಳು ಇತರ ಮಾದರಿಗಳನ್ನು ಗುರುತಿಸಲಾಗದೆ ಇರುವಂತಹ ಸ್ಥಿತಿಯೇ ಮಾನಸಿಕ ರೋಗ ಇಂತಹ ವ್ಯಕ್ತಿಗಳನ್ನು ಕಡೆಗಣಿಸದೇ ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.

ಹಿಂದಿನ ಕಾಲದಲ್ಲಿ ಮನಸ್ಸಿನ ಭಾವನೆಗೆ ಇತರರಿಂದ ಸ್ಪಂದನೆ ದೊರಕುತ್ತಿತ್ತು, ಆದರೆ ಈಗಿನ ಕಾಲದಲ್ಲಿ ಪೋಷಕರು ಮಕ್ಕಳೊಂದಿಗೆ ಹಾಗೂ ಮಕ್ಕಳು ತಮ್ಮ ಪೋಷಕರೊಂದಿಗೆ ಬೆರೆಯಲು ಅವರ ಭಾವನೆಗಳಿಗೆ ಸ್ಪಂದಿಸಲು ಸಮಯವಿಲ್ಲದೆ, ಅವರ ಭಾವನೆ ಮನಸ್ಸಿನ ದುಃಖ ಅರಿಯದೇ ಇರುವಂತಹ ಸಂಧರ್ಭದಿಂದಲೇ ಅವರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಮಾನಸಿಕ ರೋಗಕ್ಕೆ ಒಳಗಾದ ವ್ಯಕ್ತಿಗೆ ಸುತ್ತಮುತ್ತಲಿನ ವಾತಾವರಣ, ಸಂಬಧಿಕರ ಪ್ರೀತಿ, ವಾತ್ಸಲ್ಯದ ಜೊತೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಬೆಂಬಲ ನೀಡಿದಾಗ ಅವರು ತಮ್ಮ ಹಿಂದಿನ ಸಮಾತೋಲನ ಸ್ಥಿತಿಗೆ ಹಿಂತಿರುತ್ತಾರೆ. ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಮನೋರೋಗ ತಜ್ಞ ಡಾ ಅನಿರುದ್ಧ ಶೆಟ್ಟಿ ಶಿಬಿದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

Also Read  ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ

error: Content is protected !!
Scroll to Top