ಜಿಲ್ಲಾ ಪಂಚಾಯತ್ ಪುತ್ತೂರು ಕಚೇರಿಯವರ ಬಳಕೆಗಾಗಿ ಬಾಡಿಗೆ ಆಧಾರದ ಮೇಲೆ ವಾಹನವನ್ನು ಪಡೆಯಲು ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಜಿಲ್ಲಾ ಪಂಚಾಯತ್ ಪುತ್ತೂರು ಕಚೇರಿಯವರ ಬಳಕೆಗಾಗಿ ಹೊರಗುತ್ತಿಗೆ ಬಾಡಿಗೆ ಆಧಾರದ ಮೇಲೆ ಆಸಕ್ತದಾರರಿಂದ ಸ್ಥಳೀಯವಾಗಿ ಟೆಂಡರ್ ಮೂಲಕ ಟಾಟಾ ಇಂಡಿಗೋ, ಟಾಟಾ ಇಂಡಿಕಾ-ಡಿಎಲ್‍ಎಕ್ಸ್, ಟಾಟಾ ಸುಮೋ, ಬೊಲೆರೋ, ಸ್ವಿಫ್ಟ್ ಡಿಜೈರ್ ಅಥವಾ ಅದಕ್ಕೆ ಸಮಾನ ಮಾದರಿಯ ವಾಹನವನ್ನು ಪಡೆಯಲು ಟೆಂಡರ್ ಆಹ್ವಾನಿಸಿದೆ.

ಆಸಕ್ತರು ಜೂನ್ 26 ರಂದು ಸಂಜೆ 5 ಗಂಟೆಯ ಒಳಗೆ ಟೆಂಡರ್ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 0821-230905 ಸಂಪರ್ಕಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಲ್ಲಾ ಪಂಚಾಯತ್ ಪುತ್ತೂರು ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬ: ಬೂತ್ ಮಟ್ಟದ ಕಾರ್ಯಕರ್ತರ ಸಭೆ ►ಪರಿವರ್ತನಾ ಯಾತ್ರೆ ಯಶಸ್ಸಿಗೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ

error: Content is protected !!
Scroll to Top