ಡಿಪ್ಲೋಮಾ ಪದವಿಗೆ ಪ್ರವೇಶ ಪಡೆಯಲುಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ➤ವಿಶೇಷ ಮೀಸಲಾತಿ ಕೋಟಾದಲ್ಲಿ ಅಭ್ಯರ್ಥಿಗಳ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.7.2019-20ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಸ್ಪೋಟ್ರ್ಸ್/ಗೇಮ್ಸ್ ವಿಶೇಷ ಮೀಸಲಾತಿ ಕೋಟಾದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡುವ ಉದ್ದೇಶದಿಂದ ಜೂನ್ 3 ರಂದು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಎಸ್.ಜೆ.ಪಿ ಕ್ಯಾಂಪಸ್ ಶೇಷಾದ್ರಿ ರಸ್ತೆ, ಬೆಂಗಳೂರು ಇಲ್ಲಿ ನಿಗದಿಪಡಿಸಲಾದ ದಿನಾಂಕವನ್ನುಮುಂದೂಡಲಾಗಿದೆ.

ಆದ್ದರಿಂದ ಜೂನ್ 7 ರಂದು ನಿಗದಿಪಡಿಸಲಾಗಿದ್ದು ಬೆಳಿಗ್ಗೆ 9 ಗಂಟೆಗೆ ಟೆಕಿಪ್ ಸಭಾಂಗಣ, 01 ನೇ ಮಹಡಿ, ತಾಂತ್ರಿಕ ನಿರ್ದೇಶನಾಲಯ, ಬೆಂಗಳೂರು ಇಲ್ಲಿ ನಡೆಸಲಾಗುವುದು. ಸೀಟು ಆಯ್ಕೆಗಾಗಿ ಮೂಲ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಈ ಮೂಲಕ ತಿಳಿಸಲಾಗಿದೆ ಎಂಬ ಮಾಹಿತಿಯನ್ನು ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ತರಲಾಗಿದೆ.ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್‍ಗಳನ್ನು.  www.dte.kar.nic.in ನೋಡಬಹುದು ಎಂದು ಪ್ರಿನ್ಸಿಪಾಲರು ಗ್ರೇಡ್-2 ಇವರ ಪ್ರಕಟಣೆ ತಿಳಿಸಿದೆ.

Also Read  145 ಕ್ಕಿಂತ ಹೆಚ್ಚು ಸೀಟು ಪಡೆಯುತ್ತೇವೆ - ವೀರಪ್ಪ ಮೊಯ್ಲಿ

error: Content is protected !!
Scroll to Top