ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳಿಂದ ವಿಶ್ವ ಪರಿಸರ ದಿನಾಚರಣೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂನ್.6.ಬುದವಾರದಂದು ವಿಶ್ವಪರಿಸರ ದಿನದ ಪ್ರಯುಕ್ತ ವಲಯ ಅರಣ್ಯ ಇಲಾಖೆ, ಸಂಘ-ಸಂಸ್ಥೆಗಳು ಮಸೀದಿಗಳಲ್ಲಿ ಗಿಡ ನೆಟ್ಟು ಪರಿಸರ ಉಳಿಸಿ ಎಂಬ ಸಂದೇಶವನ್ನು ಸಾರಿದರು.

ಅರಣ್ಯ ಇಲಾಖೆಯಿಂದ ಕಲ್ಲಗುಡ್ಡೆ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ಪಶ್ಚಿಮಘಟ್ಟದ ವಿಶೇಷ ಜಾತಿಯ ಗಿಡ ನೆಟ್ಟು ಸಾಂಕೇತಿಕವಾಗಿ ಪರಿಸರ ದಿನವನ್ನು ಆಚರಿಸಲಾಯಿತು. ಈ ವೇಳೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ, ಹಸುರು ಉಳಿವಿಗೆ ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕು.

ಈಗಾಗಲೇ ಅರಣ್ಯ ಇಲಾಖೆಯಿಂದ ಈ ಬಾರಿ ಪಶ್ಚಿಮ ಘಟ್ಟದ ವಿಶೇಷ ಜಾತಿಯ 800 ಗಿಡ ನೆಡಲಾಗುವುದು ಎಂದು ತಿಳಿಸಿದರು.ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಗಿ, ದಿನೇಶ್‌ ಗೌಡ, ರಾಜೇಶ್‌ ಬಿ., ಉಲ್ಲಾಸ್‌, ಅರಣ್ಯ ರಕ್ಷಕರಾದ ರಾಜೇಂದ್ರ, ಸುಧಾಕರ್‌ ಮತ್ತಿತರ ವಲಯ ಅರಣ್ಯ ಸಿಬಂದಿ ಉಪಸ್ಥಿತರಿದ್ದರು.ಹಸಿರು ಉಳಿಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಹೇಳಿದರು.

Also Read  ಭಾರತೀಯ ವಾಯುಪಡೆ ಇಸ್ರೇಲ್ ನಿರ್ಮಿತ ನೂತನ ಅವತರಣಿಕೆಯ(ಶ್ರೇಣಿ) ಬಂಕರ್ ಬಸ್ಟರ್ ಸ್ಪೈಸ್-2000 ಬಾಂಬ್ ಅನ್ನು ಖರೀದಿಸಲು ಚಿಂತನೆ

error: Content is protected !!
Scroll to Top