ಸಕಾಲಕ್ಕೆ ಮಳೆ ಬಾರದೆ ಅನೇಕ ಕಡೆಗಳಲ್ಲಿನೀರಿನ ಅಭಾವ➤ಟ್ಯಾಂಕರ್ ಗಳ ಮುಕಾಂತರ ನೀರು ಪೂರೈಕೆ

(ನ್ಯೂಸ್ ಕಡಬ) newskadaba.com ಗುರುಪುರ, ಜೂನ್.6.ಸಕಾಲಕ್ಕೆ ಮಳೆ ಬಾರದೆ ಅನೇಕ ಕಡೆಗಳಲ್ಲಿನೀರಿನ ಅಭಾವ ಉಂಟಾಗಿದೆ.ಬೋರ್‌ವೆಲ್‌ನಲ್ಲಿ ನೀರು ಸಿಗದ ಕಾರಣ ಗಂಜಿಮಠ ಪಂ.ವ್ಯಾಪ್ತಿಯ ಸುರಲ್ಪಾಡಿ, ಕೈಕಂಬ ಪ್ರದೇಶಗಳಿಗೆ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅನೇಕ ಮನೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಮಳೆ ಬಾರದೇ ಇದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.  ಮಳೆ ಕಡಿಮೆಯಾದ ಹಿನ್ನೆಲೆ ಯಲ್ಲಿ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದ್ದು, ಮೊದಲೇ ನೀರು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದ ಕಾರಣ ಕೆಲವೆಡೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿತ್ತು. ಈಗ ಕೈಕಂಬದಲ್ಲಿರುವ ಬೋರ್‌ವೆಲ್‌ನಲ್ಲೂ ನೀರು ಸಿಗದಿರುವ ಕಾರಣ ಪಂಚಾಯತ್‌ ಉಪಾಧ್ಯಕ್ಷ ಝಾಕಿರ್‌ ಅವರ ಮುಂದಾಳುತ್ವದಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ.

Also Read  ಸಬಳೂರು: ಶ್ರೀರಾಮ ಗೆಳೆಯರ ಬಳಗದಿಂದ ಶ್ರಮದಾನ ► ಶ್ರೀರಾಮ ಭಜನಾ ಮಂದಿರದ ವಠಾರ ಸ್ವಚ್ಚತೆ

ಬೆಳಗ್ಗಿನಿಂದ ಸಂಜೆ ಗಂಟೆ ಆರರ ತನಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಹಳೆಯ ಬೋರ್‌ವೆಲ್‌ನಲ್ಲಿ ನೀರು ಸಿಗದ ಕಾರಣ ಇನ್ನು ಮತ್ತೂಂದು ಬೋರ್‌ವೆಲ್‌ ಕೊರೆಸಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ.ಕಳೆದ ಹತ್ತು ದಿನಗಳಿಂದ ನೀರು ಸಮಸ್ಯೆ ಇರುವುದರಿಂದ ಹೊಸ ಪಾಯಿಂಟ್‌ ನೋಡಲಾಗಿದೆ. ಅಲ್ಲಿ ಬೋರ್‌ವೆಲ್‌ ಕೊರೆಸಲು ಮುಂದಾಗಿದ್ದೇವೆ. ಜನರಿಗೆ ತೊಂದ ರೆಯಾಗದಂತೆ ನೀರು ಪೂರೈಕೆಯಲ್ಲಿತೊಡಗಿದ್ದೇವೆ,ಎಂದುತಿಳಿಸಿದ್ದಾರೆ.

 

error: Content is protected !!
Scroll to Top