ಕೇರಳದಲ್ಲಿ ಪತ್ತೆಯಾದ ನಿಫಾ ವೈರಸ್ ➤ದಕ್ಷಿಣ ಕನ್ನಡದಲ್ಲೂ ಮುಂಜಾಗ್ರತಾಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.5.ಕೇರಳದ ವಿದ್ಯಾರ್ಥಿಯೊಬ್ಬರಲ್ಲಿ ನಿಫಾ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಗಡಿಯ ದಕ್ಷಿಣ ಕನ್ನಡದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕೇರಳದಿಂದ ಮಂಗಳೂರಿಗೆ ಪ್ರತಿದಿನ ಹಲವರು ಸಂಚರಿಸುತ್ತಿರುತ್ತಾರೆ. ಅಲ್ಲದೆ ಇಲ್ಲಿನ ಆಸ್ಪತ್ರೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ.

ಅದ್ದರಿಂದ ಶಂಕಿತ ನಿಫಾ ವೈರಸ್‌ ಲಕ್ಷಣ ಗಳು ಕಂಡುಬಂದರೆ ತತ್‌ಕ್ಷಣ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂಬುದಾಗಿ ಜಿಲ್ಲೆಯ ಎಲ್ಲ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.ಹಾಗೂ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ.ಕೇರಳದಿಂದ ಮಂಗಳೂರಿಗೆ ಬಹುತೇಕ ಮಂದಿ ರೈಲಿನಲ್ಲೇ ಆಗಮಿಸುತ್ತಾರೆ. ಹಾಗಾಗಿ ರೈಲ್ವೇ ವೈದ್ಯರು ಈ ಬಗ್ಗೆ ಗಮನಹರಿಸುತ್ತಿರಬೇಕು. ಜ್ವರ ಅಥವಾ ಇತರ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳು ಕಂಡು ಬಂದಲ್ಲಿ ಸೂಕ್ತ ತಪಾಸಣೆ ನಡೆಸಬೇಕು.

Also Read  ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ► ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಬಾಲಕೃಷ್ಣ ಬಳ್ಳೇರಿ

ಸಿಬಂದಿ ಕೊರತೆ ಇದ್ದಲ್ಲಿ ರೋಗಿಗಳನ್ನು ವೆನ್ಲಾಕ್‌ಗೂ ಶಿಫಾರಸು ಮಾಡಬಹುದು ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ| ಪ್ರವೀಣ್‌ ತಿಳಿಸಿದ್ದಾರೆ.ನಿಫಾ ವೈರಸ್‌ ಪ್ರಮುಖವಾಗಿ ಬಾವಲಿ, ಹಂದಿಗಳಿಂದ ಹರಡುತ್ತದೆ. ಸಾಕುಪ್ರಾಣಿಗಳ ಮೂಲಕವೂ ಹರಡುವ ಸಾಧ್ಯತೆ ಇದೆ. ರೋಗಿಗಳು ಕೆಮ್ಮಿದಾಗ, ಸೀನಿದಾಗ ಹರಡುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅವಶ್ಯ.ಮೆದುಳು ಊತ, ಜ್ವರ, ವಾಂತಿ, ತಲೆನೋವು ಮತ್ತು ಉಸಿರಾಟದ ತೊಂದರೆ ನಿಫಾ ಜ್ವರದ ಮುಖ್ಯ ಲಕ್ಷಣಗಳು. ಅತ್ಯಧಿಕ ವೇಗದಲ್ಲಿ ಹರಡುವ ವೈರಸ್‌ ಇದಾಗಿದ್ದು, ರೋಗಿಯು 24 ಗಂಟೆಯೊಳಗೆ ಕೋಮಾಕ್ಕೆ ತೆರಳುವ ಸಾಧ್ಯತೆಗಳೂ ಇವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಈ ಲಕ್ಷಣಗಳು ಕಂಡು ಬಂದ ತತ್‌ಕ್ಷಣ ನಿಫಾ ಎಂದು ಆತಂಕಪಡುವ ಅಗತ್ಯವಿಲ್ಲ. ವೈದ್ಯರಲ್ಲಿ ತೋರಿಸಿ ಖಾತರಿ ಪಡಿಸಿಕೊಂಡ ಅನಂತರವಷ್ಟೇ ಔಷಧ ಪಡೆದುಕೊಳ್ಳಬೇಕು.

Also Read  ಈ ಬಾರಿ ಬಿಗ್ ಬಾಸ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕರಾವಳಿ ಯುವಕ ಧನರಾಜ್ ಆಚಾರ್ಯ

 

error: Content is protected !!
Scroll to Top