(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.5. ಲೋಕಸಭಾ ಚುನಾವಣೆಯ ಸಂಬಂಧ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರು ದಿನಾಂಕ:11-03-2019 ರಿಂದ 31-05-2019 ರವರೆಗೆ ಆಯುಧಗಳನ್ನು ಅಮಾನತಿನಲ್ಲಿರಿಸಿ ನಂತರ ಬಿಡುಗಡೆಗೊಳಿಸಲು ಆದೇಶಿಸಲಾಗಿರುತ್ತದೆ.
ಸದ್ರಿ ಅವಧಿಯಲ್ಲಿ ನಗರ ಸ್ಥಳೀಯ ಸಂಸ್ಥೆ, ಹಾಗೂ ಗ್ರಾಮ ಪಂಚಾಯತಿ ಚುನಾವಣೆಯ ಪ್ರಕ್ರಿಯೆಯೂ ಜ್ಯಾರಿಯಲ್ಲಿರುವುದರಿಂದ ಸದ್ರಿ ಚುನಾವಣೆಯ ಸಂಬಂಧ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತು ಪಡಿಸಿ ಪುತ್ತೂರು(1 ಕಬಕ ಮತ್ತು 5 ನೆಕ್ಕಿಲಾಡಿ) ಹಾಗೂ ಬೆಳ್ತಂಗಡಿ (28 ಉಜಿರೆ ಮತ್ತು 29 ಕೆಯ್ಯೂರು) ಗ್ರಾಮ ಪಂಚಾಯತಿಗಳ ಹಾಗೂ ಸುಳ್ಯ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯ ಆಯುಧ ಪರವಾನಿಗೆದಾರರು ದಿನಾಂಕ: 16-05-2019 ರಿಂದ 06-06-2019 ರವರೆಗೆ ಆಯುಧಗಳನ್ನು ಅಮಾನತಿನಲ್ಲಿರಿಸಿ ನಂತರ ಬಿಡುಗಡೆಗೊಳಿಸಲು ಆದೇಶಿಸಲಾಗಿರುತ್ತದೆ.
ಆದುದರಿಂದ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತು ಪಡಿಸಿ, ಪುತ್ತೂರು (1 ಕಬಕ ಮತ್ತು 5 ನೆಕ್ಕಿಲಾಡಿ) ಹಾಗೂ ಬೆಳ್ತಂಗಡಿ (28 ಉಜಿರೆ ಮತ್ತು 29 ಕೆಯ್ಯೂರು) ಗ್ರಾಮ ಪಂಚಾಯತಿಗಳ ಹಾಗೂ ಸುಳ್ಯ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯ ಆಯುಧ ಪರವಾನಿಗೆದಾರರನ್ನು ಹೊರತು ಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರ ಆಯುಧಗಳನ್ನು ಮತ್ತೆ ಆಯುಧ ಪರವಾನಿಗೆದಾರರಿಗೆ ಹಿಂದಿರುಗಿಸುವಂತೆ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.