(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.5. ಪ್ರಸಕ್ತ 2019-20ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಮೂಲನಿವಾಸಿ ಕೊರಗ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಲು ಪ್ರೋತ್ಸಾಹ ಧನವನ್ನು ವರ್ಷದಲ್ಲಿ 2 ಬಾರಿ ನೀಡಲಾಗುವುದು.
ಎಸ್.ಎಸ್.ಎಲ್.ಸಿ. – ರೂ.10,000, ಪಿ.ಯು.ಸಿ ಮತ್ತು ತತ್ಸಮಾನ ಕೋರ್ಸುಗಳು (ಪ್ರತಿ ವರ್ಷಕ್ಕೆ) – ರೂ.12,000, ಎಲ್ಲಾ ಪದವಿ ಕೋರ್ಸುಗಳು (ಪ್ರತಿ ವರ್ಷಕ್ಕೆ)ರೂ. 15,000, ಎಲ್ಲಾ ಸ್ನಾತಕೋತ್ತರ ಕೋರ್ಸುಗಳು (ಪ್ರತಿ ವರ್ಷಕ್ಕೆ) ರೂ. 18,000 ನೀಡಲಾಗುವುದು.ಆದ್ದರಿಂದ ಜಿಲ್ಲೆಯ ಕೊರಗ ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅರ್ಜಿಗಳನ್ನು ಆಯಾ ತಾಲೂಕಿನ ಸಹಾಯಕ ನಿರ್ದೇಶಕರು (ಗ್ರೇಡ್-1&2) ಸಮಾಜ ಕಲ್ಯಾಣ ಇಲಾಖೆ, ಇವರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 31.07.2019ರ ಸಂಜೆ 5.00 ಗಂಟೆಯೊಳಗೆ ನೀಡುವುದು ಎಂದು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.