ದಾಸವಾಳ ಒಂದು ಔಷಧಿ ಗಿಡ

(ನ್ಯೂಸ್ ಕಡಬ) newskadaba.com  ಆರೋಗ್ಯ ಮಾಹಿತಿ:ದಾಸವಾಳದ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯ ಅನುಕೂಲಕಾರಿ ಗುಣಗಳನ್ನು ಹೊಂದಿವೆ. ಬಾಹ್ಯ ಹಾಗೂ ಆಂತರ್ಯರೂಪದಲ್ಲಿ ದಾಸವಾಳದ ಎಲೆಯನ್ನು ಬಳಕೆ ಮಾಡಬಹುದಾಗಿದ್ದು, ಇದು ಅನೇಕ ವಿಟಮಿನ್ನುಗಳು ಹಾಗೂ ಮಿನರಲ್​ಗಳಿಂದ ಭರಿತವಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್​ಗಳು ಹೆಚ್ಚಿನ ಪ್ರಮಾಣದಲ್ಲಿದೆ.

ದೇಹಕ್ಕೆ ಹಾನಿ ಮಾಡಬಹುದಾದ ಪದಾರ್ಥಗಳನ್ನು ಹೊರಹಾಕಲು ಉಪಯುಕ್ತ.ದಾಸವಾಳದ ಎಲೆಯನ್ನು ಬಳಸಿ ಕಷಾಯ ಮಾಡಿ ಸೇವಿಸುವುದರಿಂದ ಈ ಉಪಯುಕ್ತತೆ ಸಿಗುತ್ತದೆ. ಇದರಲ್ಲಿನ ಆಂಟಿ ಆಕ್ಸಿಡೆಂಟ್​ಗಳು ಕ್ಯಾನ್ಸರ್ ವಿರುದ್ಧ ಹೋರಾಡಲು, ತೂಕ ಕಡಿಮೆ ಮಾಡಿಕೊಳ್ಳಲು, ಕೊಲೆಸ್ಟರಾಲ್​ನ ಪ್ರಮಾಣವನ್ನು ತಗ್ಗಿಸಲು ನೆರವಾಗುತ್ತವೆ. ಚರ್ಮದ ಆರೋಗ್ಯಕ್ಕೆ ದಾಸವಾಳದ ಎಲೆಗಳು ಬಹಳ ಒಳ್ಳೆಯದು. ಚರ್ಮವನ್ನು ಶುಚಿಯಾಗಿಡಲು, ಕಪು್ಪ ಕಲೆಗಳನ್ನು ಹೋಗಲಾಡಿಸಲು, ಕತ್ತಿನ ಸುತ್ತಲಿನ ಕಪ್ಪನ್ನು ಕಡಿಮೆ ಮಾಡಲು, ಸತ್ತ ಕೋಶಗಳನ್ನು ಹೋಗಲಾಡಿಸಲು, ಮೃದುವಾಗಿಡಲು ದಾಸವಾಳದ ಎಲೆಗಳು ಸಹಕಾರಿ.

ಈ ಎಲೆಗಳನ್ನು ಸ್ವಲ್ಪ ಜಜ್ಜಿ ಅದರಿಂದ ಚರ್ಮದ ಭಾಗಗಳ ಮೇಲೆ ಮಸಾಜ್ ಮಾಡಿಕೊಳ್ಳುವುದು. ಆಂಟಿ ಇನ್​ಪ್ಲಮೇಟರಿ ಗುಣವನ್ನೂ ಹೊಂದಿರುವುದರಿಂದ ನೋವಿನಿಂದ ಕೂಡಿದ ಮೊಡವೆ ನಿವಾರಿಸಲು ಈ ಎಲೆಗಳು ಸಹಾಯವಾಗುತ್ತವೆ. ಮಹಿಳೆಯರಲ್ಲಿ ಮುಟ್ಟಿನ ಮುಂಚಿನ ದಿನಗಳಲ್ಲಿ (ಪ್ರೀ ಮೆನ್ಸು್ಟ್ರವಲ್ ಸಿಂಡ್ರೋಮ್ ಕಾಡುವ ಮಾನಸಿಕ ಅಸಮತೋಲನವನ್ನು ಸರಿಮಾಡಲು ದಾಸವಾಳದ ಟೀ ಸಹಾಯಕಾರಿ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳಲು ದಾಸವಾಳದ ಎಲೆಯ ಕಷಾಯ ಉತ್ತಮ. ಶೀತವನ್ನು, ಕಫವನ್ನು ಕಡಿಮೆ ಮಾಡಲು ದಾಸವಾಳದ ಎಲೆಯನ್ನು ಅಥವಾ ಹೂವನ್ನು ಕಷಾಯ ಮಾಡಿ ಕುಡಿಯಬಹುದು.

Also Read  ಕೊಯಿಲ ಕೆ.ಸಿ. ಫಾರ್ಮ್ ಬಳಿ ಅನುಮಾನಾಸ್ಪದವಾಗಿ ವರ್ತಿಸಿದ ಜೋಡಿ ➤ ಸಾರ್ವಜನಿಕರನ್ನು ಕಂಡು ಪರಾರಿ

ಮುಖ್ಯವಾಗಿ ದಾಸವಾಳದ ಎಲೆಯಲ್ಲಿ ಇನ್ನಿತರೆ ಆಂಟಿ ಆಕ್ಸಿಡೆಂಟ್​ಗಳೊಂದಿಗೆ ವಿಟಮಿನ್ ಸಿ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಶೀತಕ್ಕೆ ಕಾರಣವಾದಂತಹ ವೈರಸ್​ಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಸಣ್ಣ ಪ್ರಮಾಣದಲ್ಲಿ ತಲೆನೋವಿದ್ದಲ್ಲಿ ದಾಸವಾಳದ ಎಲೆ ಕಷಾಯ ಮಾಡಿ ಕುಡಿಯುವುದು ಒಳ್ಳೆಯದು. ಕೂದಲಿನ ಆರೋಗ್ಯಕ್ಕೆ ಸಹ ದಾಸವಾಳದ ಎಲೆಗಳು ಒಳ್ಳೆಯದು. ಇದನ್ನು ಎಲೆಯನ್ನು ರುಬ್ಬಿಕೊಂಡು ತಲೆಗೆ ಹಚ್ಚಿಕೊಳ್ಳಬಹುದು. ಇದರಿಂದ ಹೊಟ್ಟಿನ ಸಮಸ್ಯೆ, ಕೂದಲುದುರುವಿಕೆ ಕಡಿಮೆಯಾಗುವುದಲ್ಲದೆ, ದೇಹದಲ್ಲಿ ಉಷ್ಣತೆ ಕಡಿಮೆಯಾಗಿ ಹೊಳಪಾದ, ಸೊಂಪಾದ ಕೂದಲ ಬೆಳವಣಿಗೆಯಾಗುತ್ತದೆ. ದಾಸವಾಳ ಹೂವುಗಳನ್ನೂ ಸೇರಿಸಿಕೊಳ್ಳಬಹುದು. ನೆನೆಸಿದ ಮೆಂತ್ಯ, ಮೊಸರು ಬಳಸಿದಲ್ಲಿ ಇನ್ನಷ್ಟು ಪೋಷಕಾಂಶಗಳು ದೊರಕಿ ಪ್ರಯೋಜನಗಳು ಲಭ್ಯ.

Also Read  ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ವಿಧಿವಶ

error: Content is protected !!
Scroll to Top