(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.4.ಕರ್ನಾಟಕ ಸರ್ಕಾರವು ಎಡಿಬಿ ನೆರವಿನೊಂದಿಗೆ ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2 ರಡಿಯಲ್ಲಿ ಒಳಚರಂಡಿ ಹಾಗೂ ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಸಾರ್ವಜನಿಕರಿಗೆ ಮಾಹಿತಿ ನೀಡಲು ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ.
ಇಂದು ಅಪರಾಹ್ನ 4 ಗಂಟೆಗೆ ವಾರ್ಡ್ ನಂ. 48 ರಲ್ಲಿ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಗರೋಡಿ ಸರ್ವಮಂಗಳ ಹಾಲ್‍ನಲ್ಲಿ ಕೆಯುಐಡಿಎಫ್‍ಸಿ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಹಯೋಗದಿಂದ ಆಯೋಜಿಸಲಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.