ರುಡ್‍ಸೆಟ್‍ನ ವಿದ್ಯಾರ್ಥಿಗಳಿಂದ ಉಜಿರೆಯ ಮೊಬೈಲ್ ಫೋನ್ ಗ್ರಾಹಕರಿಗೆ ಉಚಿತ ಸೇವೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.4.ರುಡ್‍ಸೆಟ್ ಸಂಸ್ಥೆಯಲ್ಲಿ ಕಳೆದ 30 ದಿನಗಳಿಂದ ನಡೆಯುತ್ತಿದ್ದ ಮೊಬೈಲ್ ರಿಪೇರಿ ಶಿಬಿರಾರ್ಥಿಗಳಿಂದ ಮೊಬೈಲ್ ಫೋನ್ ಗ್ರಾಹಕರಿಗೆ ಉಜಿರೆಯ ಸುಪ್ರೀಮ್ ಸೆಂಟರ್ ನ ಎದುರು ಒಂದು ದಿನದ ಉಚಿತ ಮೊಬೈಲ್ ಸರ್ವಿಸ್ ಕ್ಯಾಂಪ್ ನಡೆಸಲಾಯಿತು.

ರುಡ್‍ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಎಮ್. ಜನಾರ್ಧನ್‍ರವರು ಈ ಕಾರ್ಯಕ್ರಮವನ್ನು ಉಧ್ಘಾಟಿಸಿ ಶುಭ ಹಾರೈಸಿದರು. ನಿರ್ದೇಶಕರಾದ ವಿನಯ್ ಕುಮಾರ್ ಮತ್ತು ಹಿರಿಯ ಉಪನ್ಯಾಸಕರಾದ ಅಬ್ರಹಂ ಜೇಮ್ಸ್, ಅನಸೂಯ ಉಪಸ್ಥಿತರಿದ್ದರು. ಈ ಮೊಬೈಲ್ ಕ್ಯಾಂಪ್‍ನಲ್ಲಿ ಉಜಿರೆಯ ಸುಮಾರು 50 ಗ್ರಾಹಕರಿಗೆ ಉಚಿತ ಸೇವೆಯನ್ನು ನೀಡಲಾಯಿತು.

Also Read  ಕಡಬ, ಪುತ್ತೂರು ತಾಲೂಕಿನಲ್ಲಿ ಇಂದು 25 ಮಂದಿಯಲ್ಲಿ ಕೋವಿಡ್ ದೃಢ

error: Content is protected !!
Scroll to Top