(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.4.ಪ್ರಾದೇಶಿಕ ಸಾರಿಗೆ ಕಚೇರಿ, ಮಂಗಳೂರು ಇಲ್ಲಿ ಜೂನ್ 6 ರಂದು ಅಪರಾಹ್ನ 3 ರಿಂದ 4 ಗಂಟೆಯವರೆಗೆ ಜನ ಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಆದುದರಿಂದ ಸಾರ್ವಜನಿಕರು ಕಚೇರಿಗೆ ಹಾಜರಾಗಿ ಸಾರಿಗೆ ಕಚೇರಿಗೆ ಸಂಬಂಧಿಸಿದ ತಮ್ಮ ದೂರು ಹಾಗೂ ಅಹವಾಲುಗಳನ್ನು ಲಿಖಿತ ರೂಪದಲ್ಲಿ ನೀಡಲು ಪ್ರಾದೇಶಿಕ ಸಾರಿಗೆ ಅಧಿಕಾರಿ(ಪ್ರಭಾರ),ಗಳ ಪ್ರಕಟಣೆ ತಿಳಿಸಿದೆ.