ಚುನಾವಣೆಯಲ್ಲಿ ಆಯ್ಕೆಯಾದ ವಿಜಯಿ ಅಭ್ಯರ್ಥಿಗಳಿಗೆ ಸಚಿವರಿಂದ ಅಭಿನಂದನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ರಾಜ್ಯದಾದ್ಯಂತ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ವಿಜಯಿ ಅಭ್ಯರ್ಥಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಅವರು ಅಭಿನಂದಿಸಿದ್ದಾರೆ.

ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿ ಅಗತ್ಯ ಸಂಪನ್ಮೂಲಗಳನ್ನು ಸೃಷ್ಠಿಸಲು ಹಾಗೂ ಬಳಸಿಕೊಳ್ಳಲು ರಾಜ್ಯ ಸರಕಾರದಿಂದ ಎಲ್ಲಾ ನೇರವನ್ನು ಒದಗಿಸುವುದಾಗಿ ಸಚಿವರು ಹೇಳಿದರು.ಚುನಾವಣೆಯಲ್ಲಿ ವಿಜಯಿಗಳಾದ ಅಭ್ಯರ್ಥಿಗಳಿಗೆ ಹಾಗೂ ಮತದಾನ ಮಾಡಿದ ಮತದಾರರಿಗೆ ಉಸ್ತುವಾರಿ ಸಚಿವರು ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸಿದರು. ಜನರನ್ನು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಜನರ ವಿಶ್ವಾಸಕ್ಕೆ ಕುಂದು ಉಂಟಾಗದಂತೆ ಕೆಲಸ ಮಾಡಲು ಈ ಸಂದರ್ಭದಲ್ಲಿ ಅವರು ಸಲಹೆ ಮಾಡಿದರು.ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನು ಈ ಸಂದರ್ಭದಲ್ಲಿ ಸಚಿವರು ಅಭಿನಂದಿಸಿದರು.

Also Read  ಬಂಟ್ವಾಳ: ಪಿಕಪ್-ರಿಕ್ಷಾ ಢಿಕ್ಕಿ ಹೊಡೆದು ಐವರಿಗೆ ಗಾಯ

 

error: Content is protected !!
Scroll to Top