ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧಾ ವಿಜೇತರ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.3.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ನಾಲ್ಕು ವಿಭಾಗಗಳಲ್ಲಿ ಹಮ್ಮಿಕೊಂಡ ತುಳು ಲೇಖನ ಸ್ಪರ್ಧೆಯಲ್ಲಿ ಬಹುಮಾನ ಪಡೆದವರ ವಿವರ ಇಂತಿದೆ.

ತುಳುನಾಡಿನ ಅಪೂರ್ವ ಕ್ಷೇತ್ರ ಪರಿಚಯ ವಿಭಾಗದಲ್ಲಿ ಪ್ರಥಮ ನವೀನ್‍ಕುಮಾರ್ ಪೆರಾರ, ದ್ವಿತೀಯ ಸದಾನಂದ ನಾರಾವಿತುಳುನಾಡಿನ ಅಪೂರ್ವ ಸಾಧಕರು ವಿಭಾಗದಲ್ಲಿ ಪ್ರಥಮ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು, ದ್ವಿತೀಯ ಡಾ. ಕರುಣಾಕರ್ ಎನ್ ಶೆಟ್ಟಿ ತುಳುನಾಡಿನ ಅಪೂರ್ವ ನಂಬಿಕೆ ವಿಭಾಗದಲ್ಲಿ ಪ್ರಥಮ ಸುನಿತಾ ಶೆಣೈ, ದ್ವಿತೀಯ ಭರತೇಶ ಅಲಸಂಡೆಮಜಲು
ತುಳುನಾಡಿನ ಅಪೂರ್ವ ಆಚರಣೆ ವಿಭಾಗದಲ್ಲಿ ಪ್ರಥಮ ದಿವ್ಯಶ್ರೀ, ದ್ವಿತೀಯ ಯಾದವ ವಿ. ಕರ್ಕೇರ ಇವರು ಬಹುಮಾನ ಗಳಿಸಿರುತ್ತಾರೆ.

Also Read  ಕಡಬ: ನ್ಯಾಯಾಲಯ ಆರಂಭಿಸಲು ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ

ವಿಜೇತರಿಗೆ ಬಹುಮಾನಗಳನ್ನು ಅಕಾಡೆಮಿ ಚಾವಡಿಯಲ್ಲಿ ಆಯೋಜಿಸಲಾಗುವ ಕಾರ್ಯಕ್ರಮದ ಸಂದರ್ಭದಲ್ಲಿ ವಿತರಿಸಲಾಗುವುದು. ಬಹುಮಾನ ವಿಜೇತ ಲೇಖನಗಳನ್ನು ಮತ್ತು ಭಾಗವಹಿಸಿದ್ದ ಲೇಖನಗಳನ್ನು ಅಕಾಡೆಮಿ ತ್ರೈಮಾಸಿಕ ಪತ್ರಿಕೆ ಮದಿಪುವಿನಲ್ಲಿ ಪ್ರಕಟಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top