ವಿಶ್ವ ತಂಬಾಕು ರಹಿತ ದಿನಾಚರಣೆ-2019

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.1.ಮನುಕುಲಕ್ಕೆ ಮಾರಕವಾದ ತಂಬಾಕು ಸೇವನೆ ಬಗ್ಗೆ ಜಾಗೃತಿ ಮೂಡಿಸಲು ನಾವು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು, ನ್ಯಾಯಮೂರ್ತಿ ಎ.ಜಿ. ಗಂಗಾಧರರವರು ಹೇಳಿದರು.


ನಗರದ ಪುರಭವನದಲ್ಲಿ ಆಯೋಜಿಸಿದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಮಹಾನಗರ ಪಾಲಿಕೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ದಂತ ಆರೋಗ್ಯ ವಿಭಾಗ ಮಂಗಳೂರು, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ವಿಶ್ವ ತಂಬಾಕು ರಹಿತ ದಿನಾಚರಣೆ-2019” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದು ನಮ್ಮಲ್ಲರ ಕರ್ತವ್ಯ; ಈ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಹೊಣೆ ಎಂದರು. ಧೂಮಪಾನ ರಹಿತ ವಾತಾವರಣ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಹೊಣೆಯನ್ನು ನೆನಪಿಸಿದ ಅವರು, ಪ್ರತಿಯೊಂದು ವಿದ್ಯಾರ್ಥಿಯು ಯುವ ಶಕ್ತಿಗೆ ಮೂಲ ಕಾರಣ ಎಂಬುದನ್ನು ಗಮನದಲ್ಲಿರಿಸುವ ಜೊತೆಗೆ ಸಮಾಜ ಮುಖಿಯಾಗಿ ಚಿಂತಿಸುವುದರಿಂದ ಧೂಮಪಾನ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.

Also Read  ಅಪಾಯದಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಮಂಗಳೂರು ನಗರದಲ್ಲಿ ತಂಬಾಕು ನಿಯಂತ್ರಣ ಅನುಷ್ಠಾನ ಕಾಯ್ದೆ ಅಡಿಯಲ್ಲಿ ಕಾನೂನು ಅನುಷ್ಠಾನ ಪರಿಣಾಮಕಾರಿಯಾಗಿ ಆಗುತ್ತಿದ್ದು, ಕೆಲವು ಜನರು ಧೂಮಪಾನ ಮಾಡುವುದರಿಂದ ಸಾರ್ವಜಿನಿಕರಿಗೆ ತೊಂದರೆ ಆಗಬಾರದು ಎಂದರು.ಪ್ರಾಸ್ತಾವಿಕ ಮಾತುಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಮ್. ರಾಮಕೃಷ್ಣರಾವ್ ರವರು ಮಾತನಾಡಿ, “ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ” ಎಂಬ ಶೀರ್ಷಿಕೆ ಅಡಿಯಲ್ಲಿ ಇವತ್ತಿನ ಕಾರ್ಯಕ್ರಮವು ನಡೆಯುತ್ತಿದೆ ಮತ್ತು ಶ್ವಾಸಕೋಶದ ಬಗ್ಗೆ ಜನಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಂಬಾಕು ನಿಯಂತ್ರಣ ಅನುಷ್ಠಾನ ಉನ್ನತ ವರದಿ ಹಾಗೂ ಲೋಗೋವನ್ನು ಬಿಡುಗಡೆಯನ್ನು ನ್ಯಾಯಮೂರ್ತಿ ಎ.ಜಿ. ಗಂಗಾಧರರವರು ಮಾಡಿದರು. ಇದೇ ವೇಳೆಯಲ್ಲಿ ಕೋಟ್ಪಾ ಕಾಯಿದೆ ಅಡಿಯಲ್ಲಿ ಅತೀ ಹೆಚ್ಚು ಕೇಸು ದಾಖಲೆ ಮಾಡಿದ ಒಟ್ಟು 11 ಪೊಲೀಸ್ ಠಾಣೆಗೆ ಬಹುಮಾನ ವಿತರಣೆ ಮಾಡಲಾಯಿತು. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಕಾವೂರು ಪೊಲೀಸ್ ಠಾಣೆ, ಮಂಗಳೂರು ಉತ್ತರ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಬರ್ಕೆ ಪೊಲೀಸ್ ಠಾಣೆ, ಮೂಡಬಿದರೆ ಪೊಲೀಸ್ ಠಾಣೆ, ಸುರತ್ಕಲ್ ಪೊಲೀಸ್ ಠಾಣೆ, ಊರ್ವ ಪೊಲೀಸ್ ಠಾಣೆ, ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆ, ಕಂಕನಾಡಿ ಪೊಲೀಸ್ ಠಾಣೆ, ಮಹಿಳಾ ಪೊಲೀಸ್ ಠಾಣೆ ಬಹುಮಾನ ಪಡೆದುಕೊಂಡ ಪೊಲೀಸ್ ಠಾಣೆಗಳಾಗಿವೆ.

Also Read  ಯಶಸ್ವಿನಿ ಕಾರ್ಡ್ ಸಿಗದೆ ಪರದಾಟ

ನಿಭಾ ಶೆಟ್ಟಿ ಎಂಬ ವಿದ್ಯಾರ್ಥಿಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನೇರಳಕಟ್ಟೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿದ್ದು ಹೋಬಳಿ ಮಟ್ಟದ ಕಾರ್ಯಕ್ರಮಯೊಂದರಲ್ಲಿ ಸ್ವಯಂ ಪ್ರೇರಣೆಯಿಂದ ತುಂಬಾಕು ಸೇವನೆಯಿಂದಾಗುವ ದುಷ್ಪರಿಣಾಮವನ್ನು ತಿಳಿಸುವ ಛದ್ಮವೇಶ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾಳೆ ಈ ಸಂಧರ್ಭದಲ್ಲಿ ಬಾಲಕಿಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಡಾ. ರಾಜೇಶ್ ವಿ ಅಸೋಸಿಯೆಟ್ ಪ್ರೋಫೆಸರ್, ಪಲ್ಮನರಿ ಮೆಡಿಸಿನ್ ವಿಭಾಗ, ಕೆ.ಎಸ್.ಹೆಚ್.ಇ.ಎಮ್.ಎ. ದೇರಳಕಟ್ಟೆ, ಮಂಗಳೂರು ಇವರಿಂದ “ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ” ವಿಶೇಷ ಉಪನ್ಯಾಸ ನಡೆಯಿತು.

ಗೌರವ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಎಸ್. ಪ್ರಭಾಕರ ಶರ್ಮರವರು ಸ್ವಾಗತಿಸಿದರು, ಜಿಲ್ಲಾ ಶಸ್ತ್ರಚಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷಕರು, ವೆನ್ಲಾಕ್ ಆಸ್ಪತ್ರೆ, ಡಾ. ರಾಜೇಶ್ವರಿದೇವಿ, ಅಧ್ಯಕ್ಷರು, ಅಖಿಲ ಭಾರತ ಜನಜಾಗೃತಿ ವೇದಿಕೆ ಮಂಗಳೂರು ಮಹಾಬಲ ಚೌಟ, ಡೀನ್ ಎಮ್.ಸಿ.ಒ.ಡಿ.ಎಸ್. ಮಂಗಳೂರು ಡಾ. ದಿಲೀಪ್ ಜಿ. ನಾಯಕ್ ಮತ್ತು ಐ.ಡಿ.ಎ ದಕ್ಷಿಣ ಕನ್ನಡ ವಿಭಾಗ ಡಾ. ಕಾರ್ತಿಕ್ ಶೆಟ್ಟಿ ಮತ್ತು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

Also Read  ಶಿವಮೊಗ್ಗದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು..!

error: Content is protected !!
Scroll to Top