32ನೇ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರ

 

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30. 32ನೇ ರಾಜ್ಯ ಮಟ್ಟದ ವಿಜ್ಞಾನ ಲೇಖಕರ ಶಿಬಿರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ 32ನೇ ರಾಜ್ಯ ಮಟ್ಟದ ಉದಯೋನ್ಮುಖ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರವನ್ನು ಜೂನ್ 21 ರಿಂದ 24 ರವರೆಗೆ ಬೆಂಗಳೂರಿನ ಎಚ್.ಕೆ.ಇ.ಎಸ್ ಶ್ರೀ ವೀರೇಂದ್ರ ಪಾಟೀಲ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ತು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

4 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿಜ್ಞಾನ ಲೇಖನಗಳ ಬರಹ, ಲೇಖನ ಪ್ರಕಾರಗಳು, ಮಾಧ್ಯಮಕ್ಕೆ ಬರಹ, ವಿಜ್ಞಾನ ಬರಹದಲ್ಲಿನ ಸಮಸ್ಯೆಗಳು ಮುಂತಾದ ವಿಷಯದ ಬಗೆಗೆ ಮಾಹಿತಿ, ಪೂರಕ ಉಪನ್ಯಾಸಗಳನ್ನು ವಿಷಯ ತಜ್ಞರು ನೀಡಲಿದ್ದಾರೆ. ವೈಜ್ಞಾನಿಕ ಲೇಖನಗಳನ್ನು ವಿಜ್ಞಾನ ಪರಿಷತ್ತಿನ ಕಛೇರಿಗೆ ಕಳುಹಿಸಲು ಕೊನೆಯ ದಿನಾಂಕವನ್ನು ಮುಂದೂಡಲಾಗಿದ್ದು, ಆಸಕ್ತರು ತಮ್ಮ ಪರಿಣತಿ ಹಾಗೂ ಆಸಕ್ತಿಗೆ ಅನುಗುಣವಾಗಿ ಜೂನ್ 4 ರ ಒಳಗಾಗಿ 800 ಪದಗಳ ಹಾಗೂ 200 ಪದಗಳನ್ನೊಳಗೊಂಡ ಎರಡು ವೈಜ್ಞಾನಿಕ ಲೇಖನಗಳನ್ನು ತಮ್ಮ ಹೆಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸದೊಂದಿಗೆ ವಿಜ್ಞಾನ ಪರಿಷತ್ತಿನ ಇಮೇಲ್ krvp.info@gmail.com ಗೆ ಕಳುಹಿಸಲು ಕೋರಿದೆ.

Also Read  ಪುತ್ತೂರು: ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ           ➤ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು

ಈ ಹಿಂದೆ ಈಗಾಗಲೇ ಲೇಖನಗಳನ್ನು ಕಳುಹಿಸಿರುವ ಅಭ್ಯರ್ಥಿಗಳು ಮತ್ತೊಮ್ಮೆ ಕಳುಹಿಸುವ ಅಗತ್ಯವಿರುವುದಿಲ್ಲ. ಲೇಖನಗಳು ವಿಜ್ಞಾನ ಪರಿಷತ್ತಿಗೆ ಬಂದನಂತರ, ಅವುಗಳ ವಿಶ್ಲೇಷಣೆಯನ್ನು ಆಧರಿಸಿ ಬರಹಗಾರರನ್ನು ಶಿಬಿರಕ್ಕೆ ಆಹ್ವಾನಿಸಲಾಗುತ್ತದೆ. ಆಯ್ಕೆಯಾದ ಶಿಬಿರಾರ್ಥಿಗಳಿಗೆ ನಾಡಿನ ಖ್ಯಾತ ವಿಜ್ಞಾನ ಅಂಕಣಕಾರರು, ಹಿರಿಯ ವಿಜ್ಞಾನ ಲೇಖಕರು ಹಾಗೂ ವಿಜ್ಞಾನ ಕ್ಷೇತ್ರದ ಪರಿಣಿತರು ವಿಜ್ಞಾನ ಬರವಣಿಗೆ ಕುರಿತ ವಿವಿಧ ಕೌಶಲ್ಯ, ಆಕರ, ಶಬ್ದ ಬಳಕೆ ಮುಂತಾದ ಅಂಶಗಳ ಕುರಿತು 4 ದಿನಗಳ ಕಾಲ ಮಾರ್ಗದರ್ಶನ ನೀಡಲಿದ್ದಾರೆ.

ನೋಂದಣಿ ಉಚಿತವಾಗಿದ್ದು ಶಿಬಿರಾರ್ಥಿಗಳಿಗೆ ಪರಿಷತ್ತಿನಿಂದ ಊಟ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಶಿಬಿರಾರ್ಥಿಗಳೆ ಸ್ವ-ಖರ್ಚಿನಲ್ಲಿ ಶಿಬಿರಕ್ಕೆ ಆಗಮಿಸಬೇಕು.ಹೆಚ್ಚಿನ ಮಾಹಿತಿಗಾಗಿ ಶಿಬಿರದ ನಿರ್ದೇಶಕರಾದ ಹರಿಪ್ರಸಾದ್‍ರವರು ಇವರನ್ನು ಸಂಪರ್ಕಿಸಬಹುದಾಗಿದೆ. ಸಂಪರ್ಕ ಸಂಖ್ಯೆ: 9945101649, ಕಚೇರಿ ದೂರವಾಣಿ ಸಂಖ್ಯೆ: 080-26718939 / 9483549159 ಸಂಪರ್ಕಿಸಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರದ ನೆರವಿನ ಸಂಸ್ಥೆ ಇವರ ಪ್ರಕಟಣೆ ತಿಳಿಸಿದೆ.

Also Read  ಕೊರುಂದೂರು ಅಂಗನವಾಡಿಯಲ್ಲಿ ಪ್ಲಾಸ್ಟಿಕ್ ಸಂಗ್ರಹ ► ಕಡಬ ಗ್ರಾ.ಪಂ.ಗೆ ಹಸ್ತಾಂತರ

error: Content is protected !!
Scroll to Top