ಉಜಿರೆ ರುಡ್‍ಸೆಟ್‍ನಲ್ಲಿ ಎಸ್.ಡಿ.ಎಮ್ ಶಾಲಾ ಶಿಕ್ಷಕರಿಗೆ ಒಂದು ದಿನದ ಸಬಲೀಕರಣ ಮಾಹಿತಿ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.30.ಶಾಲೆಗಳು ಪ್ರಾರಂಭವಾಗುವ ಮೊದಲು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲಾ ಎಲ್ಲಾ ಶಿಕ್ಷಕರಿಗೆ ಒಂದು ದಿನದ ಸಬಲೀಕರಣ ಕಾರ್ಯಗಾರವನ್ನು ಉಜಿರೆ ರುಡ್‍ಸೆಟ್‍ನಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರದ್ಧಾ ಅಮಿತ್ ರವರು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಲ್ಲಿ ಸ್ಫೂರ್ತಿಯನ್ನು ತುಂಬುವವನೇ ನಿಜವಾದ ಶಿಕ್ಷಕ ಎಂದು ಅಭಿಪ್ರಾಯಪಟ್ಟರು.

ಈ ಕಾರ್ಯಗಾರದಲ್ಲಿ ಶಿಕ್ಷಕರಿಗೆ ಮಂಜುಗಡ್ಡೆ ಕರಗಿಸುವ ಆಟ, ಮಾನವೀಯ ಸಂಬಂಧಗಳ ಕುರಿತು ತರಬೇತಿ ಹಾಗೂ ಶಿಕ್ಷಕ ಮತ್ತು ಮಕ್ಕಳ ಸಂಬಂಧದ ಕುರಿತು ವಿಶೇಷ ಉಪನ್ಯಾಸವನ್ನು ನೀಡಲಾಯಿತು. ಕಾರ್ಯಗಾರವನ್ನು ರುಡ್‍ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಎಮ್. ಜನಾರ್ಧನ್, ಉಪನ್ಯಾಸಕರುಗಳಾದ ಅಬ್ರಹಂ ಜೇಮ್ಸ್, ಅನಸೂಯ ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿ ಎಸ್. ಜಿ. ಭಟ್‍ರವರು ನೆರವೇರಿಸಿಕೊಟ್ಟರು. ನಿರ್ದೇಶಕರಾದ ವಿನಯ್ ಕುಮಾರ್ ಸಹಕರಿಸಿದರು. ಕಾರ್ಯಗಾರದಲ್ಲಿ ಆಂಗ್ಲ ಮಾಧ್ಯಮ ಶಾಲಾ 120 ಶಿಕ್ಷಕರು ಭಾಗವಹಿಸಿದ್ದರು.

Also Read  ಮೈಸೂರು: ಕೇರಳ ಉದ್ಯಮಿ ಮೇಲೆ ಹಲ್ಲೆ; ಕಾರು, ನಗದು ದೋಚಿ ಪರಾರಿ

error: Content is protected !!
Scroll to Top