ಪಿಲಿಕುಳದಲ್ಲಿ ಜೈವಿಕ ಉದ್ಯಾನವನದಲ್ಲಿ ಅಂತರರಾಷ್ಟ್ರೀಯ ಪರಿಸರ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬ0ಧ ಸ್ಪರ್ಧೆ

 

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29.ಪಿಲಿಕುಳದಲ್ಲಿ ಜೈವಿಕ ಉದ್ಯಾನವನದಲ್ಲಿ ಅಂತರರಾಷ್ಟ್ರೀಯ ಪರಿಸರ ದಿನಾಚರಣೆ- 2019 ರ ಪ್ರಯುಕ್ತ ಪ್ರಬ0ಧ ಸ್ಪರ್ಧೆ ಜೂನ್ 5 ರ0ದು ನಡೆಯಲಿದೆ ಕಾರ್ಯಕ್ರಮದ ಅಂಗವಾಗಿ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿದ್ಯಾರ್ಥಿಗಳಿಗಾಗಿ ವಾಯು ಮಾಲಿನ್ಯ ವಿಷಯದ ಬಗ್ಗೆ ಪ್ರಬ0ಧ ಮತ್ತು ಕೊಲಾಜ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.


ಸ್ಪರ್ಧೆಯು ಕಾಲೇಜು, ಪ್ರೌಢಶಾಲಾ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಯಲಿವೆ. ವಿಜೇತರಿಗೆ ಬಹುಮಾನವನ್ನು ಹಾಗೂ ಒಂದು ವರ್ಷ ಜೈವಿಕ ಉದ್ಯಾನವನಕ್ಕೆ ಉಚಿತ ಪ್ರವೇಶ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ: ದೂರವಾಣಿ-0824-2263300, 919980187057 ವೆಬ್ಸೈಟ್-www.pilikulazoo.org ಸಂಪರ್ಕಿಸಲು ಹೆಚ್.ಜೆ.ಭಂಡಾರಿ ನಿರ್ದೇಶಕರು ಪಿಲಿಕುಳ ಜೈವಿಕ ಉದ್ಯಾನವನ ಇವರ ಪ್ರಕಟಣೆ ತಿಳಿಸಿದೆ.

Also Read  ಕಡಬ: ದೇವಸ್ಥಾನದಿಂದ‌ ಚಿನ್ನ, ಬೆಳ್ಳಿ ಕಳ್ಳತನ

error: Content is protected !!
Scroll to Top