ಶಾಲೆ ಕಡೆ ನನ್ನ ನಡೆ ವಿಶೇಷ ದಾಖಲಾತಿ ಆಂದೋಲನ ಹೊಸ ಯೋಜನೆ ಜಾರಿ

 

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮಂಗಳೂರು, ಉಪನಿರ್ದೇಶಕರು(ಆಡಳಿತ), ಸಮಗ್ರ ಶಿಕ್ಷಣ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರವಲಯ ಪಡಿ ವೆಲೊರೆಡ್ ಮಂಗಳೂರು ಇವರ ಸಹಭಾಗಿತ್ವದಲ್ಲಿ ಹೊಸ ಯೋಜನೆ ಅರಂಭಗೊಂಡಿದೆ.

ಶಾಲೆ ಕಡೆ ನನ್ನ ನಡೆ ಶಾಲೆಗೆ ಮರಳಲು ನನಗೊಂದು ಅವಕಾಶ ಎಂಬ ಘೋಷವಾಕ್ಯದಡಿ ವಿಶೇಷ ದಾಖಲಾತಿ ಆಂದೋಲನ 2019-20 ಇದರ ಜಿಲ್ಲಾ ಹಂತದ ಕಾರ್ಯಕ್ರಮವು ಮೇ 29 ರಂದು ಪೂರ್ವಾಹ್ನ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೋಡಿಕಲ್ ಮಂಗಳೂರು ಇಲ್ಲಿ ನಡೆಯಲಿದೆ.

Also Read  ಮಂಗಳೂರಲ್ಲಿ ಪತ್ರಕರ್ತರಿಗೆ ಕೊರೋನ ಪಾಸಿಟಿವ್

error: Content is protected !!
Scroll to Top