ಪಣಂಬೂರ್ ಬೀಚ್ ಕಿಕ್ಕಿರಿದ ಪ್ರವಾಸಿಗರು ➤ಒಂದೇ ದಿನ 20 ಸಾವಿರಕ್ಕೂ ಹೆಚ್ಚಿನ ಮಂದಿ..!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.ರವಿವಾರ ಪಣಂಬೂರ್‌ ಬೀಚ್‌ಗೆ ಸುಮಾರು 20,000ಕ್ಕೂ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದಾರೆ.ಶಾಲಾ ವಿದ್ಯಾರ್ಥಿಗಳಿಗೆ ಇನ್ನೇನು ರಜೆ ಕೊನೆಗೊಳ್ಳುತ್ತಿದ್ದು, ವಿವಿಧ ಜಿಲ್ಲೆ, ರಾಜ್ಯಗಳಿಂದ ಬೀಚ್‌ಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಜಿಲ್ಲೆಯ ಕೆಲವು ಕಡೆಗಳಲ್ಲಿ ಮಳೆ ಬಂದರೂ, ಬೇಸಗೆಯ ಸೆಕೆ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ನಗರದ ಬೀಚ್‌ಗಳಿಗೆ ಆಗಮಿಸುವ ಮಂದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ.ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಮಳೆ ಬಾರದ ಕಾರಣಕ್ಕೆ ಸಮುದ್ರ ಕೂಡ ಶಾಂತವಾಗಿದೆ. ಇದರಿಂದಾಗಿ ಹೆಚ್ಚಿನ ಮಂದಿ ಪ್ರವಾಸಿಗರು ನೀರಿನಲ್ಲಿಆಡಲು ಇಷ್ಟಪಡುತ್ತಿದ್ದಾರೆ. ಇದಕ್ಕೆ ತಕ್ಕಂತೆ, ಸುರಕ್ಷೆಗೂ ಹೆಚ್ಚಿನ ಒತ್ತು ನೀಡಲಾಗಿದೆ.ಕಳೆದ ಕೆಲ ತಿಂಗಳುಗಳಿಗೆ ಹೋಲಿಕೆ ಮಾಡಿದರೆ ಪಣಂಬೂರು ಮತ್ತು ತಣ್ಣೀರ್‌ಬಾವಿ ಬೀಚ್‌ಗಳಿಗೆ ಬರುವವರ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿದೆ.

Also Read  ಮಂಡ್ಯದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಿಕ್ಕಿ ಮಹಿಳೆ ಮೃತ್ಯು

ಪಣಂಬೂರಿಗೆ ಪ್ರತೀ ದಿನ ಸುಮಾರು 4,000 ಕ್ಕೂ ಹೆಚ್ಚಿನ ಮಂದಿ ಆಗಮಿಸುತ್ತಿದ್ದಾರೆ. ವೀಕೆಂಡ್‌ ಬಂತೆಂದರೆ ಈ ಸಂಖ್ಯೆ ಸುಮಾರು 15,000ಕ್ಕೂ ಮಿಕ್ಕಿ ಏರುತ್ತಿದೆ. ಇನ್ನು, ಸುಲ್ತಾನ್‌ ಬತ್ತೇರಿ ಬೀಚ್‌ಗೆ ಪ್ರತಿನಿತ್ಯ ಸುಮಾರು 3,000 ಮಂದಿ ಆಗಮಿಸುತ್ತಾರೆ. ವೀಕೆಂಡ್‌ಗಳಲ್ಲಿ 10,000ದಷ್ಟು ಮಂದಿ ಭೇಟಿ ನೀಡುತ್ತಿದ್ದಾರೆ. ಆದರೆ, ಈಗ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಇದ್ದು, ವೀಕೆಂಡ್‌ಗಳಲ್ಲಿ ಎರಡೂ ಬೀಚ್‌ಗಳಲ್ಲಿ ಸುಮಾರು 30,000ಕ್ಕೂ ಮಿಕ್ಕಿ ಮಂದಿ ಆಗಮಿಸುತ್ತಿದ್ದಾರೆ.ಪ್ರವಾಸಿಗರು ಏರಿಕೆಯಾಗುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆ ಕೂಡ ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡುವತ್ತ ಹೆಚ್ಚಿನ ಗಮನಹರಿಸುತ್ತಿದೆ. ಪಣಂಬೂರು ಬೀಚ್‌ನಲ್ಲಿ ಸದ್ಯ ಬೋಟಿಂಗ್‌ ಸ್ಟಾಪ್‌ ಸೇರಿದಂತೆ ಲೈಫ್‌ಗಾರ್ಡ್‌ನವರನ್ನು 16 ಮಂದಿಗೆ ಏರಿಕೆ ಮಾಡಲಾಗಿದೆ. ಜತೆಗೆ ಬೀಚ್‌ ಬದಿಗಳಲ್ಲಿ ನಾನಾ ರೀತಿಯ ತಿನಿಸುಗಳ ಅಂಗಡಿಗಳು ಕೂಡ ತಲೆ ಎತ್ತಿವೆ.

Also Read  ವಿಟ್ಲ : ರಫೀಕ್ ಕೆ ಎಂ ರವರಿಗೆ "ಮುಖ್ಯಮಂತ್ರಿಗಳ ಚಿನ್ನದ ಪದಕ"

error: Content is protected !!
Scroll to Top