ದ.ಕ ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ ಹಳೆಯ ಮತ್ತು ನಿರುಪಯುಕ್ತ ಸಾಮಾಗ್ರಿಗಳಬಹಿರಂಗ ಹರಾಜು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿರುವ ವೈರ್‍ಲೆಸ್ ಗೆ ಸಂಬಂಧಿಸಿದ ಹಳೆಯ ಮತ್ತು ನಿರುಪಯುಕ್ತ ಸಾಮಾಗ್ರಿಗಳನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜೂನ್ 10 ರಂದು ಪೂರ್ವಾಹ್ನ 11 ಗಂಟೆಗೆ ಹರಾಜು ಏರ್ಪಡಿಸಲಾಗಿದೆ. ಆಸಕ್ತ ಬಿಡ್‍ದಾರರು ಹರಾಜಿಗೆ ಒಂದು ಗಂಟೆಗೆ ಮುಂಚಿತವಾಗಿ ಇ.ಎಂ.ಡಿ ಮೊತ್ತ ರೂ 3000/ ದೊಂದಿಗೆ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ, ಕಚೇರಿ ವೇಳೆಯಲ್ಲಿ ಮಾಹಿತಿ ಪಡೆಯಲು ಎಂದು ಪೊಲೀಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ವಾಹನಗಳ ಬ್ಯಾಟರಿ ಕಳವು ಪ್ರಕರಣ- ಸೊತ್ತು ಸಹಿತ ಆರೋಪಿ ವಶಕ್ಕೆ

error: Content is protected !!
Scroll to Top