ವಿಶ್ವ ರಕ್ತದಾನಿಗಳ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ರಕ್ತದಾನ ಅತ್ಯಂತ ಪವಿತ್ರವಾದ ದಾನ. ಇದು ಸಾವಿರಾರು ಜನರ ಪ್ರಾಣವನ್ನು ನಿತ್ಯವೂ ಉಳಿಸುತ್ತಿದೆ. ಜಿಲ್ಲೆಯಲ್ಲಿ ಸಹಸ್ರಾರು ಯುವಕ ಯುವತಿಯರು ಪ್ರತಿನಿತ್ಯ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ರೋಗಿಗಳ ಜೀವಕ್ಕೆ ಆಶಾಕಿರಣವಾಗಿರುತ್ತಾರೆ.

ಅಂತಹ ರಕ್ತದಾನಿಗಳ ಸ್ವಯಂಪ್ರೇರಿತ ಸೇವೆಯನ್ನು ಸ್ಮರಿಸುವ ದಿನ ವಿಶ್ವ ರಕ್ತದಾನಿಗಳ ದಿನ ಜೂನ್ 14 ರಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಪುರಭವನದಲ್ಲಿ ಆಚರಿಸಿ, ರಕ್ತದಾನಿಗಳನ್ನು ಗೌರವಿಸಲಾಗುವುದು. 15 ಬಾರಿಗಿಂತ ಮೇಲ್ಪಟ್ಟು ರಕ್ತದಾನ ಮಾಡಿದ ವ್ಯಕ್ತಿಗಳು ದಾಖಲೆಗಳೊಂದಿಗೆ ಮಾಹಿತಿ ನೀಡಬೇಕು. ಒಂದೇ ಕುಟುಂಬದ ಎಲ್ಲಾ ಅರ್ಹ ಸದಸ್ಯರು ರಕ್ತದಾನ ನೀಡಿದ್ದಲ್ಲಿ ಅವರೂ ಕೂಡಾ ಗೌರವಕ್ಕೆ ಅರ್ಹರಾಗಿರುತ್ತಾರೆ. ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ ಸಂಘ ಸಂಸ್ಥೆಗಳನ್ನೂ ಪ್ರೋತ್ಸಾಹಿಸಿ, ಗೌರವಿಸುವ ಕಾರ್ಯಕ್ರಮವಿದ್ದು ಅವರು ಕೂಡಾ ಅರ್ಜಿ ಸಲ್ಲಿಸಬಹುದು.

Also Read  ಕಡಬ: ದೂರವಾಣಿ ಇಲಾಖೆಯ ವೆಂಕಪ್ಪ ಗೌಡರಿಗೆ ಬೀಳ್ಕೊಡುಗೆ

ದಾಖಲೆಗಳ ಪರಿಶೀಲನೆ ಮತ್ತು ಆಯ್ಕೆಯ ವಿಧಾನದಲ್ಲಿ ರೆಡ್‍ಕ್ರಾಸಿನ ತೀರ್ಮಾನವೇ ಅಂತಿಮ. ಆಸ್ತಕರು ಜೂನ್ 5 ರೊಳಗೆ ಗೌರವ. ಕಾರ್ಯದರ್ಶಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ, ರೆಡ್‍ಕ್ರಾಸ್ ಭವನ, ಜಿಲ್ಲಾಧಿಕಾರಿಯವರ ಕಚೇರಿ ಆವರಣ, ಮಂಗಳೂರು -575001 ಇವರಿಗೆ ದಾಖಲೆಗಳನ್ನು ಖುದ್ದಾಗಿ ಅಥವಾ ಇ-ಮೇಲ್ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ:- 0824-2423755 ಇ-ಮೇಲ್:ircsdkd@gmail.com ಸಂಪರ್ಕಿಸಬಹುದು ಎಂದು ಗೌರವ ಕಾರ್ಯದರ್ಶಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಇವರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top