ಬಾಹ್ಯಾಕಾಶ ಅನ್ವೇಷಣೆ -ಚಲನಚಿತ್ರ ಪ್ರದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27.ಪಿಲಿಕುಳದ ಸ್ವಾಮಿ ವಿವೇಕಾನಂದ ತಾರಾಲಯದಲ್ಲಿ ಬಾಹ್ಯಾಕಾಶಯಾನದ ಉದಯ (Dawn of the Space Age) ಎಂಬ ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಹೊಸ 3ಡಿ ಚಲನಚಿತ್ರವನ್ನು ಮೇ 26 ರಿಂದ ಪ್ರದರ್ಶಿಸಲಾಗುವುದು.

ಈ ಪ್ರದರ್ಶನವು ಚಂದ್ರನತ್ತ ಉಡಾವಣೆಗೊಂಡ ಪ್ರಥಮ ಬಾಹ್ಯಾಕಾಶ ಕೃತಕ ಉಪಗ್ರಹ ಸ್ಪುಟ್ನಿಕ್‍ನಿಂದ ಹಿಡಿದು ಇತ್ತೀಚಿನವರೆಗೆ ಮಾನವ ನಡೆಸಿದ ಬಾಹ್ಯಾಕಾಶ ಅನ್ವೇಷಣೆ ಕುರಿತ 4ಕೆ 3ಡಿ ಪ್ರದರ್ಶನ. ವಾರದ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ದಿನಗಳಲ್ಲಿ ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ 3 ಪ್ರದರ್ಶನಗಳಿರುತ್ತವೆ, ಉಳಿದ ದಿನಗಳಲ್ಲಿ ಕಾಣದ ಜಗತ್ತಿನ ರಹಸ್ಯಗಳು (Mysteries of the Unseen World) 3ಡಿ ಪ್ರದರ್ಶನವು ಪ್ರದರ್ಶಿಸಲ್ಪಡುವುದು.

Also Read  ಜೂ. 8ರಿಂದ ರಾಜ್ಯದ ಎಲ್ಲಾ ಶಿಕ್ಷಕರು ಶಾಲೆಗಳಿಗೆ ಹಾಜರಾಗಬೇಕು ➤ ಸಚಿವ ಸುರೇಶ್ ಕುಮಾರ್

ಸಂದರ್ಶಕರು www.pilikula.com/ Book My Show ಜಾಲತಾಣದಲ್ಲಿ ಮುಂಗಡವಾಗಿ ಟಿಕೇಟುಗಳನ್ನು ಕಾಯ್ದಿರಿಸಬಹುದಾಗಿದೆ. ಈ ಪ್ರದರ್ಶನಗಳು ಸಾರ್ವಜನಿಕರಿಗೆ ಮುಖ್ಯವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದ್ದು ಇದರ ಸದುಪಯೋಗವನ್ನು ಸಂದರ್ಶಕರು ಪಡೆದುಕೊಳ್ಳಬೇಕಾಗಿ ಡಾ ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top