ಪಾಕ್ ಜೊತೆಮಾತುಕತೆ ನಡೆಸುವುದಿಲ್ಲ ➤ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಮೇ.25.ಪುಲ್ವಾಮಾ ದಾಳಿ ನಂತರದಲ್ಲಿ  ಭಾರತ ಮತ್ತು ಉಭಯ ದೇಶಗಳೊಂದಿಗಿನ ಸಂಬಂಧ ಇನ್ನಷ್ಟು ಕುಸಿದಿತ್ತು. ಅಷ್ಟೇ ಅಲ್ಲ, ಬಾಲಕೋಟ್‌ನಲ್ಲಿ ಭಾರತ ಪ್ರತಿದಾಳಿ ನಡೆಸಿ ಉಗ್ರರನ್ನು ಮಟ್ಟಹಾಕಿದ ಮೇಲಂತೂ ಇನ್ನಷ್ಟು ಬಿಗಡಾಯಿಸಿತ್ತು.

ಭಾರತದ ಪ್ರತಿಯೊಬ್ಬ ಭಾರತೀಯನೂ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಸಾಧಿಸಬೇಕು ಎಂದೇ ಬಯಸುತ್ತಾನೆ. ಬಾಂಗ್ಲಾದೇಶ, ನೇಪಾಳ, ಭೂತಾನ್‌, ಶ್ರೀಲಂಕಾ, ಮಾಲ್ಡೀವ್ಸ್‌, ಅಫ್ಘಾನಿಸ್ತಾನದ ಜೊತೆಗೆ ನಮ್ಮ ಸಂಬಂಧ ಉತ್ತಮವಾಗಿದೆ. ಪಾಕಿಸ್ತಾನವು ಉಗ್ರ ಸಂಘಟನೆಗಳನ್ನು ಬೆಂಬಲಿಸುತ್ತಿರುವವರೆಗೂ ಭಾರತ ಮಾತುಕತೆ ನಡೆಸುವುದಿಲ್ಲ ಎಂದು ಅಮೆರಿಕಕ್ಕೆ ಭಾರತದ ರಾಯಭಾರಿ ಹರ್ಷವರ್ಧನ್‌ ಶ್ರಿಂಗ್ಲಾ ಪುನರುಚ್ಛರಿಸಿದ್ದಾರೆ.  ಭಾರತದಲ್ಲಿ ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆಯೇ ಅವರು ಈ ಹೇಳಿಕೆ ನೀಡಿದ್ದು ಮಹತ್ವ ಪಡೆದಿದೆ.

Also Read  ಜನರ ಕಣ್ಣೆದುರೇ ಕಾನ್‌ಸ್ಟೆಬಲ್‌ನನ್ನು ಇರಿದು ಕೊಂದ ಕಳ್ಳ...!

 

 

error: Content is protected !!
Scroll to Top