ಪ್ರಧಾನಿ ನರೇಂದ್ರ ಮೋದಿ ಪ್ರಚಂಡ ಚುನಾವಣಾ ವಿಜಯಕ್ಕೆ ಫ್ರಾನ್ಸ್ ಅಧ್ಯಕ್ಷರಿಂದ ಅಭಿನಂದನೆ

(ನ್ಯೂಸ್ ಕಡಬ) newskadaba.com ಫ್ರಾನ್ಸ್, ಮೇ.25.ಪ್ರಧಾನಿ ನರೇಂದ್ರ ಮೋದಿ ಪ್ರಚಂಡ ಚುನಾವಣಾ ವಿಜಯಕ್ಕೆ ಫ್ರಾನ್ಸ್‌ಅಧ್ಯಕ್ಷಇಮ್ಯಾನುವೆಲ್‌ಮ್ಯಾಕ್ರೋನ್‌ಅವರು ಅಭಿನಂದಿಸಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಭಾಗವಹಿಸಿರುವ ಕಾರಣ ವಿಶ್ವದ ಅತೀ ದೊಡ್ಡ ಭಾರತೀಯ ಪ್ರಜಾಸತ್ತೆಯು ಸಂವೇದನಾಶೀಲವಾಗಿದೆ ಎಂದು ಮ್ಯಾಕೋನ್‌ ಹೇಳಿದ್ದಾರೆ.

ಉಭಯ ದೇಶಗಳ ಮತ್ತು ವಿಶ್ವದ ಭದ್ರತೆಗಾಗಿ ಹಾಗೂ ದೀರ್ಘ‌ಕಾಲೀನ ಅಭಿವೃದ್ಧಿಗಾಗಿ ಜತೆಗೂಡಿ ಶ್ರಮಿಸುವುದನ್ನು ಮುಂದುವರಿಸೋಣ ಎಂದು ಮ್ಯಾಕ್ರೋನ್‌ ತಮ್ಮ ಅಭಿನಂದನಾ ಸಂದೇಶದಲ್ಲಿ ಹೇಳಿದ್ದಾರೆ.

Also Read  ರಷ್ಯಾ - ಉಕ್ರೇನ್ ಸಂಘರ್ಷ!

error: Content is protected !!
Scroll to Top