ದುಡಿಯುವ ಮಹಿಳೆಯರಿಗಾಗಿ ಆಂತರಿಕ ದೂರು ಸಮಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.25.“ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ-2013” ರನ್ವಯ ಸರ್ಕಾರಿ, ಖಾಸಗಿ, ನಿಗಮ ಮಂಡಳಿ, ಸಾರ್ವಜನಿಕ ಉದ್ಯಮಗಳು, ಫ್ಯಾಕ್ಟರಿಗಳು ಇತ್ಯಾದಿ 10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ “ಆಂತರಿಕ ದೂರು ಸಮಿತಿ”ಯನ್ನು ರಚನೆ ಮಾಡುವುದು ಕಡ್ಡಾಯವಾಗಿರುತ್ತದೆ.

ಸದರಿ “ಆಂತರಿಕ ದೂರು ಸಮಿತಿ”ಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಪುನರಚಿಸಬೇಕು. ಇದಕ್ಕೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ವೆಬ್‍ಸೈಟ್: kscw.kar.nic.in ಡೌನ್ ಲೋಡ್ ಮಾಡಿಕೊಳ್ಳಬೇಕು. ಮಾಲೀಕರು ಅಥವಾ ಉದ್ಯೋಗದಾತರು ಮೇಲ್ಕಂಡ ಕರ್ತವ್ಯಗಳನ್ನು ನಿರ್ವಹಿಸಲು ತಪ್ಪಿದಲ್ಲಿ ರೂ.50,000/- ಗಳವರೆಗೆ ದಂಡ ನೀಡಬೇಕಾಗುತ್ತದೆ ಮತ್ತು ಇಂತಹ ಕಾರ್ಯಗಳು ಪುನರಾವರ್ತನೆಯಾದಲ್ಲಿ ಪ್ರತಿ ಬಾರಿಯು ಕರ್ತವ್ಯ ಉಲ್ಲಂಘನೆಗಾಗಿ ಹಣದ ಎರಡರಷ್ಟು ದಂಡ ನೀಡಬೇಕಾಗುತ್ತದೆ.

Also Read  ಮೆಕ್ಸಿಕೋ ಭಾರೀ ಭೂಕಂಪ ► ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆ

10 ಅಥವಾ 10ಕ್ಕಿಂತ ಹೆಚ್ಚಿನ ಸಿಬ್ಬಂದಿಗಳಿರುವ ಸ್ಥಳಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡಿ ವರದಿಯನ್ನು ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸುವುದು ಮತ್ತು 10 ಕ್ಕಿಂತ ಕಡಿಮೆ ಸಿಬ್ಬಂದಿಗಳಿದ್ದಲ್ಲಿ ಕೂಡ ಈ ಬಗ್ಗೆ ವರದಿಯನ್ನು ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಬೇಕು. ಪಾರದರ್ಶಕವಾದ “ದೂರು ಪೆಟ್ಟಿಗೆ”ಯನ್ನು ಕಡ್ಡಾಯವಾಗಿ ಅಳವಡಿಸಬೇಕು. 10 ಕ್ಕಿಂತ ಕಡಿಮೆ ಸಿಬ್ಬಂದಿಗಳು ಇರುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದಂತಹ ಘಟನೆ ಸಂಭವಿಸಿದಲ್ಲಿ ದೂರನ್ನು ಜಿಲ್ಲಾ ಮಟ್ಟದ “ಸ್ಥಳೀಯ ದೂರು ಸಮಿತಿ”ಗೆ ನೀಡಬೇಕು.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಟ್ಟಡ, ಕೊಟ್ಟಾರ, ಉರ್ವಾಸ್ಟೋರ್, ಅಶೋಕ ನಗರ ಅಂಚೆ, ಮಂಗಳೂರು-575006, ದೂರವಾಣಿ: 0824-2451254, 2453071 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

Also Read  ಬಂಟ್ವಾಳ: ಮಹಾಮಳೆಗೆ ಮುರಿದು ನದಿಗೆ ಬಿದ್ದ ಮುಳ್ಳರಪಟ್ಣ ಸೇತುವೆ ► ವಾಹನ ಸಂಚಾರವಿಲ್ಲದ ಕಾರಣ ತಪ್ಪಿದ ಭಾರೀ ಅನಾಹುತ

error: Content is protected !!
Scroll to Top