ಬಾಳೆಕಾಯಿಯ ಸೇವನೆಯಂದ ದೇಹದಲ್ಲಿ ಹೆಚ್ಚುತ್ತದೆ ರೋಗನಿರೋಧಕ ಶಕ್ತಿ

(ನ್ಯೂಸ್ ಕಡಬ) newskadaba.com , ಆರೋಗ್ಯಮಾಹಿತಿ.ಸಾಮಾನ್ಯವಾಗಿ ನಾವೆಲ್ಲ ಬಾಳೆಹಣ್ಣನ್ನು ಸೇವಿಸುತ್ತೇವೆ. ಸುಲಭವಾಗಿ ಕಡಿಮೆ ದರದಲ್ಲಿ ಎಲ್ಲರ ಕೈಗೆಟುಕುವಂಥದ್ದು ಬಾಳೆಹಣ್ಣು. ಇದು ಅನೇಕ ಆರೋಗ್ಯ ಸಹಕಾರಿ ಗುಣಗಳನ್ನು ಹೊಂದಿದೆ. ಆದರೆ ಬಾಳೆಹಣ್ಣು ಮಾತ್ರವೇ ಅಲ್ಲ; ಬಾಳೆಕಾಯಿ ಸಹ ಅನೇಕ ಆರೋಗ್ಯ ಅನುಕೂಲಕಾರಿ ಗುಣಗಳನ್ನು ಹೊಂದಿರುವುದು ವಿಶೇಷ.ನಾರಿನಾಂಶವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವಂತಹ ಬಾಳೆಕಾಯಿಯು ರಕ್ತದಲ್ಲಿನ ಸಕ್ಕರೆ ಅಂಶವನ್ನು ಹತೋಟಿ ಮಾಡುತ್ತದೆ. ಹೃದಯವನ್ನು ಆರೋಗ್ಯಯುತವಾಗಿ ನೋಡಿಕೊಳ್ಳಲು ಕೂಡ ಸಹಕಾರಿ.

ಬಾಳೆಕಾಯಿಯು ನಮ್ಮ ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್ನುಗಳು ಹಾಗೂ ಖನಿಜಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ವಿಟಮಿಮಿನ್ ಸಿ ಹಾಗೂ ವಿಟಮಿನ್ ಬಿ6 ಮುಖ್ಯವಾದವುಗಳಾಗಿವೆ. ಚರ್ಮದ ಆರೋಗ್ಯಕ್ಕೆ ಹಾಗೂ ಕೂದಲಿನ ಆರೋಗ್ಯಕ್ಕೆ ಇದು ಸಹಕಾರಿ.ಬಾಳೆಕಾಯಿಯನ್ನು ಸೇವಿಸುದರಿಂದ ದೇಹದಲ್ಲಿ ರೋಗನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್​ಗಳು ಪ್ರೀ ರ್ಯಾಡಿಕಲ್ಸ್ ನಿಂದ ದೇಹಕ್ಕೆ ಉಂಟಾಗಬಹುದಾದ ಹಾನಿಯನ್ನು ತಡೆಯಲು ಅನುಕೂಲಕಾರಿ.

Also Read  ಅಡ್ಡೂರು ಪ್ರದೇಶವನ್ನು 'ಮಿನಿ ಪಾಕಿಸ್ತಾನ' ಎಂದು ಕರೆದಿರುವ ಭರತ್ ಶೆಟ್ಟಿಯವರ ನಡೆ ಖಂಡನೀಯ- ಎಸ್ಡಿಪಿಐ

ನಾವು ಸೇವಿಸಿದ ಆಹಾರವನ್ನು ಶಕ್ತಿಯಾಗಿ ಬದಲಾಯಿಸಲು ಹಾಗೂ ಮಿದುಳಿನ ಕಾರ್ಯಚಟುವಟಿಕೆಯನ್ನು ಹೆಚ್ಚಿಸಲು ಬಾಳೆಕಾಯಿಯ ಸೇವನೆಯು ನೆರವಾಗುತ್ತದೆ. ಜೀರ್ಣಕ್ರಿಯೆಯನ್ನು ಸರಾಗ ಮಾಡಲು, ಮಲಬದ್ಧತೆಯನ್ನು ಕಡಿಮೆ ಮಾಡಲು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ನಾರಿನಂಶವು ಸಹಾಯ ಮಾಡುತ್ತದೆ. ದೇಹದಲ್ಲಿ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡಲು ಹಾಗೂ ಪಾರ್ಶ್ವವಾಯು ಆಗುವಂತಹ ಸಂಭವನೀಯತೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಕೂಡ ಬಾಳೆಕಾಯಿಯು ಹೊಂದಿದೆ. ಈ ಬಾಳೆಕಾಯಿಯನ್ನು ದೈನಂದಿನ ಅನೇಕ ಆಹಾರಪದಾರ್ಥಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡುವುದು ರೂಢಿಯಲ್ಲಿದೆ

error: Content is protected !!
Scroll to Top